Advertisement

Mangalore: ಪೊಲೀಸ್‌ “ಪರ್ಸ್‌’ ಎಗರಿಸಿದ ಕಳ್ಳ!

09:42 PM Jun 20, 2024 | Team Udayavani |

ಮಂಗಳೂರು: ನಗರದ ಪಿವಿಎಸ್‌ ಬಳಿ ಗುರುವಾರ ನಡೆದ ಬಿಜೆಪಿ ಪ್ರತಿಭಟನೆ ಸಂದರ್ಭ ಸ್ಥಳದಲ್ಲಿದ್ದ ಪೊಲೀಸ್‌ ಸಿಬಂದಿಯೊಬ್ಬರ ಪರ್ಸನ್ನು ಕಳ್ಳ ಎಗರಿಸಿದ್ದಾನೆ.

Advertisement

ಪ್ರತಿಭಟನೆ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದ್ದಾರೆ. ಈ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಕಳ್ಳ “ಸಿವಿಲ್‌ ಡ್ರೆಸ್‌’ನಲ್ಲಿದ್ದ ಪೊಲೀಸ್‌ ಸಿಬಂದಿಯ ಪರ್ಸ್‌ ಎಗರಿಸಿದ್ದಾನೆ. ಸ್ಥಳದಲ್ಲಿದ್ದ ಮಾಧ್ಯಮದವರ ವೀಡಿಯೋದಲ್ಲಿ ಈ ದೃಶ್ಯ ಸೆರೆಯಾಗಿದೆ. ಆರೋಪಿಯ ಪತ್ತೆಗಾಗಿ ಶೋಧ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next