ದೋಹಾ: ಆರ್ಜೆಂಟೀನಾವನ್ನು ಬುಡಮೇಲು ಮಾಡಿ ಫಿಫಾ ವಿಶ್ವಕಪ್‌ನಲ್ಲಿ ಅಮೋಘ ಫಲಿತಾಂಶ ದಾಖಲಿಸಿದ್ದ ಸೌದಿ ಅರೇಬಿಯಾ ತನ್ನ ದ್ವಿತೀಯ ಪಂದ್ಯದಲ್ಲಿ ಇದೇ ಮ್ಯಾಜಿಕ್ ಮಾಡಲು ವಿಫಲವಾಯಿತು. ಪೋಲೆಂಡ್ ವಿರುದ್ಧ 0-2 ಅಂತರದ ಸೋಲನುಭವಿಸಿತು.
ಇದು ಈ ಕೂಟದಲ್ಲಿ ಪೋಲೆಂಡ್‌ಗೆ ಒಲಿದ ಮೊದಲ ಗೆಲುವು. ಮೆಕ್ಸಿಕೊ ವಿರು ದ್ಧದ ಮೊದಲ ಪಂದ್ಯವನ್ನು ಅದು ಡ್ರಾ ಮಾಡಿ ಕೊಂಡಿತ್ತು. ಹೀಗೆ ಅಜೇಯ ಸಾಧನೆ ದಾಖಲಿ ಸಿರುವ ಪೋಲೆಂಡ್ 1986ರ ಬಳಿಕ ಮೊದಲ ಸಲ ನಾಕೌಟ್ ಪ್ರವೇಶಿಸುವ ಸಾಧ್ಯತೆಯನ್ನು ತೆರೆದಿರಿಸಿದೆ.
ಪಂದ್ಯದ 39ನೇ ನಿಮಿಷದಲ್ಲಿ ಪಿಯೋಟರ್ ಝೀಲಿನ್‌ಸ್ಕಿ ಪೋಲೆಂಡ್ ಪರ ಮೊದಲ ಗೋಲು ಬಾರಿಸಿದರು. ಈ ನಡುವೆ ಸೌದಿ ಕೂಡ ಆಕ್ರಮಣಗೈದಿತಾದರೂ ಪೋಲೆಂಡ್ ಗೋಲ್‌ಕೀಪರ್ ಎರಡೂ ಸಲ ಚೆಂಡನ್ನು ತಡೆದು ತಂಡವನ್ನು ಬಚಾಯಿಸಿದರು. 82ನೇ ನಿಮಿಷ ದಲ್ಲಿ ರಾಬರ್ಟ್ ಲೆವಾಂಡೋವ್‌ಸ್ಕಿ ಇನ್ನೊಂದು ಗೋಲು ಸಿಡಿಸಿ ಅಂತರವನ್ನು ಹೆಚ್ಚಿಸಿದರು. ಅಲ್ಲಿಗೆ ಡ್ರಾ ಸಾಧಿಸುವ ಅವಕಾಶ ಕೂಡ ಸೌದಿ ಅರೇಬಿಯಕ್ಕೆ ಇಲ್ಲವಾಯಿತು.
ಆರ್ಜೆಂಟೀನಾವನ್ನು ಸೋಲಿಸಿದ ಕಾರಣಕ್ಕಾಗಿ ಸೌದಿ ದೊರೆ ಮೊಹಮ್ಮದ್ ಬಿನ್ ಸಲಾಂ ಅಲ್ ಸೌದ್ ತಂಡದ ಆಟಗಾರರಿಗೆಲ್ಲ ರೋಲ್ಸ್ ರಾಯ್ಸ ಫ್ಯಾಂಟಮ್ ಕಾರನ್ನು ಉಡುಗೊರೆ ನೀಡುವುದಾಗಿ ಘೋಷಿಸಿದ್ದರು.