Advertisement
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ರದ್ದು ಮಾಡಿದ ಬಳಿಕ, ಪಿಒಕೆಯನ್ನು ವಶಪಡಿಸಿಕೊಳ್ಳುವತ್ತ ಸರಕಾರ ಗಮನ ನೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಜ.ರಾವತ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.
Related Articles
Advertisement
82 ದಿನ ಪೂರ್ಣ: ಕಣಿವೆ ರಾಜ್ಯದಲ್ಲಿ 370ನೇ ವಿಧಿ ರದ್ದುಗೊಳಿಸಿ ಶುಕ್ರವಾರ 82 ದಿನ ಪೂರ್ಣಗೊಂಡಿದೆ. ಪ್ರಮುಖ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಇನ್ನೂ ಅವಕಾಶ ನೀಡದ ಕಾರಣ, ಶ್ರೀನಗರದಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿಯು ಸತತ 12ನೇ ಶುಕ್ರವಾರವೂ ಬಾಗಿಲು ಮುಚ್ಚಿದ್ದು, ಸುತ್ತಲೂ ಭದ್ರತಾ ಪಡೆಗಳ ಬಿಗಿಭದ್ರತೆ ಮುಂದುವರಿದಿದೆ.
6 ಲಕ್ಷ ಮೆ.ಟ. ಹಣ್ಣು ಸಾಗಣೆ: ಈ ಮಧ್ಯೆ, ಕಳೆದ 3 ತಿಂಗಳ ಅವಧಿಯಲ್ಲಿ ಸುಮಾರು 6 ಲಕ್ಷ ಮೆಟ್ರಿಕ್ ಟನ್ ಹಣ್ಣುಗಳನ್ನು ಕಾಶ್ಮೀರದಿಂದ ಹೊರಕ್ಕೆ ಸಾಗಣೆ ಮಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಸರಕಾರದ ಅಧಿಕೃತ ವಕ್ತಾರರು ಮಾಹಿತಿ ನೀಡಿದ್ದಾರೆ. 11 ದಿನಗಳಲ್ಲಿ ಉಗ್ರರು ಕಾಶ್ಮೀರೇತರ ನಾಲ್ವರನ್ನು ಹತ್ಯೆಗೈದಿದ್ದು, ಈ ಪೈಕಿ ಮೂವರು ಹಣ್ಣು ಹಂಪಲು ಸಾಗಿಸುವ ಟ್ರಕ್‌ಗಳ ಚಾಲಕರಾಗಿದ್ದಾರೆ.
ಮತ್ತೆ ಮಧ್ಯಸ್ಥಿಕೆಯ ಮಾತುಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಮತ್ತೆ ಮಧ್ಯಸ್ಥಿಕೆ ವಿಚಾರ ಪ್ರಸ್ತಾಪವಾಗಿದೆ. ಭಾರತ ಮತ್ತು ಪಾಕ್ ಕೇಳಿಕೊಂಡರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಿದ್ಧ ಎಂದು ಅಮೆರಿಕ ಶುಕ್ರವಾರ ಪುನರುಚ್ಚರಿಸಿದೆ. ಜತೆಗೆ ರಚನಾತ್ಮಕ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥವಾಗಲಿ ಎಂದೂ ಹೇಳಿದೆ. ಇನ್ನೊಂದೆಡೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಗುಟೆರಸ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದು, ಎರಡೂ ದೇಶಗಳು ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ. ಮತ ದಾಖಲೆಗೆ ಸಂತಸ
ಗುರುವಾರ ಜಮ್ಮು-ಕಾಶ್ಮೀರದಲ್ಲಿ ನಡೆದ ರಾಜ್ಯದ ಮೊತ್ತ ಮೊದಲ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್(ಬಿಡಿಸಿ) ಚುನಾವಣೆಯಲ್ಲಿ ಶೇ.98.3 ಮತದಾನ ದಾಖಲಾಗಿ ರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಸ್ಥಾನಮಾನ ರದ್ದತಿಯ ನಿರ್ಧಾರವೇ ದಾಖಲೆ ಮತದಾನಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯ 22 ಸೇರಿದಂತೆ 27 ಅಭ್ಯರ್ಥಿಗಳು ಅವಿರೋಧವಾಗಿ ಚುನಾಯಿತರಾಗಿದ್ದಾರೆ.