Advertisement

ಎಸ್‌ಎಫ್ಐಒ ಮುಂದೆ ಪಿಎನ್‌ಬಿ ಮುಖ್ಯಸ್ಥ ಸುನೀಲ್‌ ಮೆಹ್ತಾ

07:30 AM Mar 08, 2018 | Team Udayavani |

ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದಿರುವ 12,600 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಸಿಇಒ ಸುನೀಲ್‌ ಮೆಹ್ತಾರನ್ನು ಐದು ತಾಸುಗಳ ವರೆಗೆ ಗಂಭೀರ ಆರ್ಥಿಕ ಅಪರಾಧಗಳ ತನಿಖಾ ವಿಭಾಗ (ಎಸ್‌ಎಫ್ಐಒ) ವಿಚಾರಣೆ ನಡೆಸಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಚಾರಣೆ ನಡೆಸಲಾಗಿದೆ. ಅವ್ಯವಹಾರ ನಡೆದಿದ್ದು ಹೇಗೆ ಮತ್ತು ಯಾಕೆ ಬೆಳಕಿಗೆ ಬರಲಿಲ್ಲ ಎಂಬುದನ್ನು ತಿಳಿಯುವ ಉದ್ದೇಶದಿಂದ ವಿಚಾರಣೆ ನಡೆಸಲಾಗಿದೆ. ಈ ಮಧ್ಯೆ ಐಸಿಐಸಿಐ ಮತ್ತು ಆಕ್ಸಿಸ್‌ ಬ್ಯಾಂಕ್‌ನ ಅಧಿಕಾರಿಗಳು ವಿಚಾರಣೆಯ ವೇಳೆ, ನೀರವ್‌ ಸಂಸ್ಥೆಯಿಂದ ಸಾಲ ವಸೂಲಾತಿ ಮಾಡುವ ಯಾವುದೇ ಅವಕಾಶವಿಲ್ಲ ಎಂದಿದ್ದಾರೆ ಎಂಬುದು ತಿಳಿದುಬಂದಿದೆ.

Advertisement

ನೀರವ್‌ ವಿರುದ್ಧದ ಕೇಸ್‌ ಸಡಿಲ?: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 12600 ಕೋಟಿ ರೂ. ಮೋಸ ಮಾಡಿರುವ ನೀರವ್‌ ಮೋದಿ ವಿರುದ್ಧದ ಪ್ರಕರಣ ಅಷ್ಟೇನೂ ಗಟ್ಟಿಯಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ ಜಾರಿ ನಿರ್ದೇಶನಾಲಯಕ್ಕೆ ಈ ಸಂಬಂಧ ನೋಟಿಸನ್ನೂ ಕೋರ್ಟ್‌ ನೀಡಿದೆ. ನೀರವ್‌ ವಿರುದ್ಧದ ಪ್ರಕರಣವು ಕಲ್ಪನೆ ಆಧರಿತವಾಗಿದೆ ಎಂದೆನಿಸುತ್ತಿದೆ ಎಂದು ದೆಹಲಿ ಹೈಕೋರ್ಟ್‌ ಜಡ್ಜ್ ಹೇಳಿದ್ದಾರೆ. 

ಸ್ವತ್ತು ವಾಪಸ್‌ ನೀಡಿ ಎಂದ ನೀರವ್‌: ಲಕ್ಷುರಿ ಕಾರುಗಳು ಹಾಗೂ ಆಮದು ಮಾಡಿದ ವಾಚ್‌ಗಳನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿರುವುದಕ್ಕೆ ನೀರವ್‌ ಆಕ್ಷೇಪಿಸಿ ದ್ದಾರೆ. ಈ ಸ್ವತ್ತುಗಳನ್ನು ಕಾನೂನು ಬಾಹಿರವಾಗಿ ವಶಪಡಿಸಿ ಕೊಳ್ಳಲಾ ಗಿದ್ದು, ನನಗೆ ಪುನಃ ನೀಡಬೇಕು ಎಂದು ಅವರು ಕೋರಿದ್ದಾರೆ. ಜಪ್ತಿ ಮಾಡುವಾಗ ವಾರಂಟ್‌ನ ಪ್ರತಿಯನ್ನು ಅಧಿಕಾರಿಗಳಿಗೆ ನೀಡಿಲ್ಲ ಎಂದೂ ಅವರು ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next