ಅರ್ಹತಾ ನಿಯಮ ಈ ಸಬ್ಸಿಡಿ ಯೋಜನೆಗೆ ಅರ್ಜಿ ಹಾಕು ವವರು ಭಾರತದ ಯಾವುದೇ ಭಾಗದಲ್ಲಿ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಒಂದು ಪಕ್ಕಾ ಮನೆ ಯನ್ನು ಹೊಂದಿರಬಾರದು. ಅಲ್ಲದೆ, ಇನ್ನಾವುದೇ ಸರಕಾರಿ ಗೃಹ ಸಂಬಂಧಿ ಸಬ್ಸಿಡಿ ಪಡೆದಿರಬಾರದು. ಪತಿ ಮತ್ತು ಪತ್ನಿ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಸಬ್ಸಿಡಿಗೆ ಅರ್ಜಿ ಹಾಕುವಂತಿಲ್ಲ. ಒಂದು ಕುಟುಂಬಕ್ಕೆ ಒಂದೇ ಸಬ್ಸಿಡಿ ಲೆಕ್ಕ. ಇಲ್ಲಿ ಕುಟುಂಬ ಎಂದರೆ ಗಂಡ/ಹೆಂಡತಿ ಹಾಗೂ ಮದುವೆಯಾಗದ ಮಕ್ಕಳು. ಮಕ್ಕಳಲ್ಲೂ ಆದಾಯವಿರುವ ಮೇಜರ್ ಮಕ್ಕಳನ್ನು ಪ್ರತ್ಯೇಕ ಕುಟುಂ ಬವೆಂದು MIG ತರಗತಿಯಲ್ಲಿ ಪರಿಗಣಿಸಬಹುದಾ ಗಿದೆ. ಈ ಸೌಲಭ್ಯ ಸಂಬಳ ಆದಾಯ ಮತ್ತು ಸ್ವ-ಉದ್ಯೋಗ ನಿರತರಿಗೂ ಸಿಗುತ್ತದೆ.
Advertisement
ಈ ಯೋಜನೆಯಲ್ಲಿ ಮನೆಯ ಮತ್ತು ಸಾಲದ ಮೌಲ್ಯಗಳ ಮೇಲೆ ಮಿತಿ ಇಲ್ಲದಿದ್ದರೂ ಸಬ್ಸಿಡಿಗೆ ಅರ್ಹವಾದ ಸಾಲದ ಮೊತ್ತದ ಮೇಲೆ ಮಿತಿ ಇದೆ. ಇದು ಮೂರೂ ವರ್ಗಗಳಿಗೆ ಅನ್ವಯಿಸುವಂತೆ ರೂ 6, 9 ಮತ್ತು 12 ಲಕ್ಷ. ಯಾವುದೇ ಸಾಲದ ಮೇಲಾದರೂ ಒಬ್ಟಾತನಿಗೆ EWS/LIG ವರ್ಗದಲ್ಲಿ ರೂ. 2.67 ಲಕ್ಷದ ಗರಿಷ್ಟ ಮಿತಿಯೊಳಗಷ್ಟೇ ಸಬ್ಸಿಡಿ ಸಿಕ್ಕೀತು. ಉಳಿದ ಎರಡು ವರ್ಗಗಳಿಗೆ ಅದು ರೂ. 2.35 ಹಾಗೂ 2.30 ಲಕ್ಷ. ಗೃಹ ಸಾಲದ ಅವಧಿಯನ್ನು ಬ್ಯಾಂಕು ಮತ್ತು ಗ್ರಾಹಕರು ನಿರ್ಧರಿಸಿಕೊಂಡರೂ ಸಬ್ಸಿಡಿಯ ಸೌಲಭ್ಯ ಮಾತ್ರ ಗರಿಷ್ಟ 20 ವರ್ಷಗಳ ಅವಧಿಗಷ್ಟೇ ಸೀಮಿತವಾಗಿದೆ. ಅಲ್ಲದೆ, EWS ವರ್ಗದಲ್ಲಿ ಮನೆಗೆ ಮಹಿಳಾ ಮಾಲಿಕತ್ವ ಕಡ್ಡಾಯ.
Related Articles
Advertisement
ಸ್ಕೀಮಿನ ವಿವರಗಳುPMAY(URBAN)&CLSS ಯೋಜನೆಯ ಅನುಸಾರ ಸರಕಾರವು ಒಂದು ಮನೆಯ ಖರೀದಿ/ನಿರ್ಮಾಣ/ವಿಸ್ತರಣೆ/ಅಭಿವೃದ್ಧಿಯ ಸಲುವಾಗಿ ಸರಕಾರವು ಹೌಸಿಂಗ್ ಲೋನಿನ ಬಡ್ಡಿಯ ಮೇಲೆ ಆರ್ಥಿಕವಾಗಿ ದುರ್ಬಲ ವರ್ಗ (EWS) ಮತ್ತು ಕಡಿಮೆ ಆದಾಯ ವರ್ಗ (LIG) ದ ಗ್ರಾಹಕರಿಗೆ ಒಟ್ಟಾಗಿ ಈ ಸಬ್ಸಿಡಿ ಸೌಲಭ್ಯವನ್ನು 2015 ರಲ್ಲಿ ಆರಂಭಿಸಿತು. ಆರಂಭದ ಹಂತದಲ್ಲಿ ಕೆಳವರ್ಗಕ್ಕೆ ಮಾತ್ರ ಸೀಮಿತವಾದ ಈ ಸ್ಕೀಮನ್ನು ಆ ಬಳಿಕ 2107ರಲ್ಲಿ ಮಧ್ಯಮ ವರ್ಗಕ್ಕೂ ಅನ್ವಯಿಸುವಂತೆ ಪರಿಷ್ಕರಿಸಲಾಯಿತು. ಮಧ್ಯಮ ವರ್ಗದಲ್ಲಿ ಎರಡು ಉಪವರ್ಗಗಳಿವೆ. ಹಾಗಾಗ ಈಗ ಒಟ್ಟು EWS/LIG, MIG -1 ಹಾಗೂ MIG – 2 ಎಂಬ ಮೂರು ವರ್ಗಗಳಿವೆ. ಈ ಮೂರೂ ವರ್ಗಗಳನ್ನು ವಾರ್ಷಿಕ ಕೌಟುಂ ಬಿಕ ಆದಾಯದ ಮೇರೆಗೆ ವಿಂಗಡಿಸಲಾಗಿದೆ. (ಟೇಬಲ್ ನೋಡಿ) ಅರ್ಥಿಕ ದುರ್ಬಲ ವರ್ಗ ಅಥವಾ EWSವರ್ಗಕ್ಕೆ ವಾರ್ಷಿಕ ಕೌಟುಂಬಿಕ ವರಮಾನ ರೂ. 3 ಲಕ್ಷ ಮೀರ ಬಾರದು. ಕೆಳ ಆದಾಯ ವರ್ಗ ಅಥವಾ LIGವರ್ಗದ ವರ ಮಾನ ರೂ. 3-6 ಲಕ್ಷ ಇರಬೇಕು. ಮಧ್ಯಮ ಆದಾಯ ವರ್ಗದಲ್ಲಿ ಎರಡು ಭಾಗಗಳಿವೆ. ರೂ. 6-12 ಲಕ್ಷದ ವರ ಮಾನದವರನ್ನು MIG-1 ಹಾಗೂ ರೂ. 12-18 ಲಕ್ಷದ ವರಮಾನದವರನ್ನು MIG-2 ಎಂದು ವಿಂಗಡಿಸಲಾಗಿದೆ.
ಪಕ್ಕದಲ್ಲಿ ನೀಡಿರುವ ಟೇಬಲ್ ನೋಡಿದರೆ ಸ್ಕೀಮಿನ ವಿವರಗಳು ಸ್ಪಷ್ಟವಾಗುತ್ತವೆ. ವಿವಿಧ ವರ್ಗಗಳ ಅಡಿಯಲ್ಲಿ ಮನೆಗೆ ಅರ್ಹ ಕಾಪೆìಟ್ ಏರಿಯ ನಿಗದಿಪಡಿಸಲಾಗಿದೆ. ಇದನ್ನು ಮೀರಿದ ಕಾಪೆìಟ್ ಏರಿಯ ಹೊಂದಿದ ಮನೆಗಳು ಕೂಡಾ ಅರ್ಜಿಗೆ ಅರ್ಹ. ಆದರೆ ಸಬ್ಸಿಡಿ ಮೊತ್ತ ನಮೂದಿಸಿದ ಕಾಪೆìಟ್ ಏರಿಯಾಕ್ಕೆ ಮಾತ್ರ ಸೀಮಿತವಾಗಿರುತ್ತದೆ.