Advertisement

ಪ್ರಧಾನಿ ಮೋದಿ ಕೇರಳ ಪ್ರವಾಸ; ಐಎನ್ಎಸ್ ವಿಕ್ರಾಂತ್ ನಾಡಿಗೆ ಸಮರ್ಪಣೆ

02:57 PM Sep 01, 2022 | Team Udayavani |

ಕೊಚ್ಚಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಎರಡು ದಿನಗಳ ಪ್ರವಾಸ ಮಾಡಲಿದ್ದಾರೆ. ಗುರುವಾರ ಸಂಜೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣದ ಬಳಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

Advertisement

ರಾತ್ರಿ ಕೇರಳ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಕುರಿತಾಗಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ ಭಾರತ ನಿರ್ಮಿಸಿದ ಐಎನ್ಎಸ್ ವಿಕ್ರಾಂತ್ ಯುದ್ದ ಹಡಗನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಕಾಲಡಿ ಆದಿ ಶಂಕರ ಜನ್ಮಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ಅನಂತರ ಮಂಗಳೂರಿಗೆ ಆಗಮಿಸಲಿದ್ದಾರೆ.

ಗುರುವಾರ ಸಂಜೆ 6 ಗಂಟೆಗೆ ಕೊಚ್ಚಿ ಮೆಟ್ರೋ ಹಂತ- II ಯೋಜನೆಗೆ ಶಂಕುಸ್ಥಾಪನೆ ಮತ್ತು ಎಸ್‌ಎನ್ ಜಂಕ್ಷನ್‌ನಿಂದ ವಡಕ್ಕೆಕೋಟಾದವರೆಗಿನ ಮೊದಲ ಹಂತ-1A ಯನ್ನು ಉದ್ಘಾಟಿಸಲಿದ್ದಾರೆ. ಅದಲ್ಲದೆ,  ದಕ್ಷಿಣ ರಾಜ್ಯದಲ್ಲಿ ವಿವಿಧ ರೈಲ್ವೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರ ಸ್ವಾಗತಕ್ಕೆ ಎರ್ನಾಕುಲಂ ಜಿಲ್ಲೆಯಲ್ಲಿ ಭಾರೀ ಸಿದ್ದತೆ ನಡೆಸಲಾಗಿದೆ. ಮಂಗಳೂರಿನಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next