Advertisement
ಪಂಜಾಬ್ ಪೊಲೀಸರೇ ಈ ಎಫ್ಐಆರ್ ದಾಖಲಿಸಿದ್ದು, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ವಿಚಿತ್ರವೆಂದರೆ ಐಪಿಸಿ ಸೆಕ್ಷನ್ 283ರಂತೆ ದೂರು ದಾಖಲಾಗಿದ್ದು, ಇದರಲ್ಲಿ ತಪ್ಪಿತಸ್ಥರಾದವರಿಗೆ ಗರಿಷ್ಠ 200 ರೂ.ವರೆಗೆ ದಂಡ ವಿಧಿಸಬಹುದಾಗಿದೆ.
Related Articles
Advertisement
ಸುರಕ್ಷಿತ ವಾಗಿರಿಸಿ: ಭದ್ರತಾ ಲೋಪ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಕೂಡ ಶುಕ್ರವಾರ ವಿಚಾರಣೆ ನಡೆಸಿದ್ದು, ಪ್ರಧಾನಿ ಅವರ ಟ್ರಾವೆಲ್ ಹಿಸ್ಟರಿಯನ್ನು ಸುರಕ್ಷಿತವಾಗಿ ಇರಿಸುವಂತೆ ಸೂಚಿಸಿದೆ. ಪಂಜಾಬ್ ಪೊಲೀಸರು, ಎಸ್‌ಪಿಜಿ, ಕೇಂದ್ರ ಮತ್ತು ರಾಜ್ಯದ ತನಿಖಾ ತಂಡಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ರಿಜಿಸ್ಟ್ರಾರ್ ಜನರಲ್‌ಗೆ ಸೂಕ್ತ ನೆರವು ನೀಡುವಂತೆ ಆದೇಶಿಸಿದೆ. ಅಂದರೆ ಅಂದಿನ ಘಟನೆಯ ಎಲ್ಲ ದಾಖಲೆಗಳನ್ನು ಸಂಗ್ರಹಿಸಲು ಆರ್‌ಜಿಗೆ ನೆರವು ನೀಡಬೇಕು ಎಂದಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರಕಾರ ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಚನ್ನಿ ಆರೋಪಿಸಿದ್ದಾರೆ.
ಅಪಾಯದ ಸ್ಥಳದಲ್ಲಿದ್ದರು..ಪ್ರಧಾನಿ ಮೋದಿ ಅವರು ಬುಧವಾರ 20 ನಿಮಿಷಗಳ ಕಾಲ ಕಾದ ಸ್ಥಳ ಪಾಕಿಸ್ಥಾನದಿಂದ ಕೇವಲ 10 ಕಿ.ಮೀ.ದೂರದಲ್ಲಿದ್ದು, ಅವರು ಅತ್ಯಂತ ಅಪಾಯದ ಸ್ಥಳದಲ್ಲಿದ್ದರು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪ್ರಧಾನಿಗೆ ಜೀವ ಭಯವಿರಲಿಲ್ಲ ಎಂದ ಪಂಜಾಬ್ ಮುಖ್ಯಮಂತ್ರಿ ಮತ್ತು ತಮ್ಮದೇ ಪಕ್ಷದ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ತಿರುಗೇಟು ನೀಡಿದ್ದಾರೆ. ಅಂದು ಪ್ರಧಾನಿಯವರು ಪಾಕಿಸ್ಥಾನದ ಶೂಟಿಂಗ್ ರೇಂಜ್‌ನ ಒಳಗೇ ಇದ್ದರು. ಅವರಿಗೆ ಜೀವಭಯವಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಅಂದು ಅಲ್ಲಿ ಇದ್ದವರು ಪ್ರಧಾನಿಗಳು. ಬೇರಾರೂ ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.