ವಾಷಿಂಗ್ಟನ್ ಡಿಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಗುರುವಾರ ಪತ್ರಕರ್ತರಿಂದ ಪ್ರಶ್ನೆಗಳನ್ನು ಎದುರಿಸಲಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ವೇತ ಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಜಿರ್ಬಿ ಈ ಜಂಟಿ ಪತ್ರಿಕಾಗೋಷ್ಠಿಯನ್ನು ‘ಬಿಗ್ ಡೀಲ್’ ಎಂದು ಬಣ್ಣಿಸಿದ್ದಾರೆ.
“ಪ್ರಧಾನಿ ಮೋದಿ ಅವರು ಭೇಟಿಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಇದು ಮುಖ್ಯ ಎಂದು ನಾವು ಭಾವಿಸುತ್ತೇವೆ. ಅಲ್ಲದೆ ಮೋದಿ ಅವರು ಅದನ್ನು ಸಹ ಮುಖ್ಯವೆಂದು ಭಾವಿಸಿದ್ದಾರೆ. ಇದು ನಮಗೆ ಸಂತೋಷ ತಂದಿದೆ” ಎಂದು ಕಿರ್ಬಿ ರಾಯಿಟರ್ಸ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಮೋದಿ ಸರ್ಕಾರದ ವಿರುದ್ಧ ಒಂದಾದ ಪ್ರತಿಪಕ್ಷಗಳು; ಸಭೆಗೆ ಗೈರಾಗಲಿದೆ ಆರ್ ಎಲ್ ಡಿ, ಬಿಎಸ್ ಪಿ
ಯುಎಸ್ ಪ್ರೆಸ್ ನಿಂದ ಒಂದು ಪ್ರಶ್ನೆ ಮತ್ತು ಭಾರತೀಯ ಪತ್ರಕರ್ತರಿಂದ ಒಂದು ಪ್ರಶ್ನೆ ಕೇಳಲಾಗುವುದು ಎಂದು ಅವರು ಹೇಳಿದರು.
ಇತರ ವಿಶ್ವ ನಾಯಕರೊಂದಿಗಿನ ಶ್ವೇತಭವನದ ಪತ್ರಿಕಾಗೋಷ್ಠಿಗಳನ್ನು ಅಧಿಕಾರಿಗಳು ನಿಯಂತ್ರಿಸುತ್ತಾರೆ. ಅಮೇರಿಕನ್ ಮತ್ತು ವಿದೇಶಿ ಮಾಧ್ಯಮಗಳಿಂದ ವರದಿಗಾರರನ್ನು ಮೊದಲೇ ಗೊತ್ತುಪಡಿಸುತ್ತಾರೆ ಮತ್ತು ಬಹಳ ಸೀಮಿತ ಸಂಖ್ಯೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.