ಅಯೋಧ್ಯೆ : ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಸಾಧು-ಸಂತರ ಬೆಂಬಲ ಬೇಕಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಭರವಸೆಯನ್ನು ಕೊಡಬೇಕು ಎಂದು ರಾಮಜನ್ಮ ಭೂಮಿ- ಬಾಬರಿ ಮಸೀದಿ ವಿವಾದಾತ್ಮಕ ತಾಣದಲ್ಲಿನ ತಾತ್ಕಾಲಿಕ ರಾಮ ದೇಗುಲದ ಮುಖ್ಯ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
“ಮಹಾಂತರು ಮತ್ತು ಸಾಧುಗಳು ಭಗವಾನ್ ರಾಮನಲ್ಲಿ ನಂಬಿಕೆ, ವಿಶ್ವಾಸ ಹೊಂದಿರುವರು; ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿಮಾರ್ಣಗೊಳ್ಳುವುದೊಂದೇ ಅವರ ಹೆಬ್ಬಯಕೆಯಾಗಿದೆ’ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದರು. ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಯೋಧೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದೆಂಬ ಭರವಸೆಯನ್ನು ನಾವು ಹೊಂದಿದ್ದೆವು ಎಂದು ದಾಸ್ ಹೇಳಿದರು.
ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ಕೊಡಬೇಕು; ತಮ್ಮ ಆಡಳಿತಾವಧಿಯಲ್ಲೇ ಆಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುವುದೆಂಬ ಭರವಸೆಯನ್ನು ಅವರು ನಮಗೆ ಕೊಡಬೇಕು; ಆಗಲೇ ನಾವು ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಹಿಂದೂ ಸಮೂಹದ ಮತಗಳು ಸಿಗುವಂತೆ ಮಾಡುವೆವು. ಉತ್ತರ ಪ್ರದೇಶದಲ್ಲಿ ಮಹಾಂತರು ಮತ್ತು ಸಾಧುಗಳಿಗೆ ಅತ್ಯುತ್ತಮ ಜನಬೆಂಬಲವಿದೆ ಎಂದು ಎಂದು ದಾಸ್ ಹೇಳಿದರು.