Advertisement

ಕಾಂಗ್ರೆಸ್‌ ಮುಸ್ಲಿಂ ಪುರುಷರ ಪಕ್ಷವೇ,ಮಹಿಳೆಯರ ಪಕ್ಷವೇ?ಮೋದಿ ಪ್ರಶ್ನೆ

07:30 PM Jul 14, 2018 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಮುಸ್ಲಿಮರ ಪಕ್ಷ ಎಂದು ಹೇಳಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

‘ಕಾಂಗ್ರೆಸ್‌ ಪಕ್ಷ ಕೇವಲ ಮುಸ್ಲಿಮ್‌ ಪುರುಷರ ಪರ ಇರುವ ಪಕ್ಷವೇ ಅಥವಾ ಮುಸ್ಲಿಂ ಮಹಿಳೆಯರ ಪರವೂ ಇರುವ ಪಕ್ಷವೇ ಎಂದು ನಾನು ರಾಹುಲ್‌ ಗಾಂಧಿ ಅವರನ್ನು ಕೇಳಲು ಬಯಸುತ್ತೇನೆ’ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. 

ಉತ್ತರ ಪ್ರದೇಶದ ಆಜಮ್‌ಗಢದಲ್ಲಿ ಸಾರ್ವಜನಿಕ ಭಾಷಣ ಮಾಡುತ್ತಿದ್ದ ಮೋದಿ ಅವರು “ಕಾಂಗ್ರೆಸ್‌ ಸಹಿತ ಹಲವು ಪಕ್ಷಗಳನ್ನು ತ್ರಿವಳಿ ತಲಾಕ್‌ ಪ್ರಶ್ನೆಯು ಸಾಕಷ್ಟು ಎಕ್ಸ್‌ ಪೋಸ್‌ ಮಾಡಿದೆ.ಒಂದು ಕಡೆ ಕೇಂದ್ರ ಸರಕಾರ ಮುಸ್ಲಿಂ ಮಹಿಳೆಯರ ಬದುಕನ್ನು ಸುಧಾರಿಸುವ ಪ್ರಯತ್ನ ಮಾಡುತ್ತಿದೆ; ಇನ್ನೊಂದೆಡೆ ಈ ಪಕ್ಷಗಳು ಅವರ ಬದುಕನ್ನು ದುರ್ಭರಗೊಳಿಸುವ ಯತ್ನದಲ್ಲಿ ನಿರತವಾಗಿವೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next