Advertisement

ಪ್ರಧಾನಿ ಮೋದಿ 7ನೇ ಸ್ವಾತಂತ್ರ್ಯ ಭಾಷಣ ; ಹಲವು ಹೊಸ ಘೋಷಣೆಗಳ ನಿರೀಕ್ಷೆ

12:08 AM Aug 15, 2020 | mahesh |

ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ ಏಳನೇ ಸ್ವಾತಂತ್ರ್ಯ ದಿನದ ಭಾಷಣ. ಹೀಗಾಗಿ, ಅವರು ಯಾವ ರೀತಿ ಘೋಷಣೆಗಳನ್ನು ಮಾಡಲಿದ್ದಾರೆಯೇ, ಏನಾದರೂ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆಯೇ ಅಥವಾ ಪ್ರಜೆಗಳಿಗೆ ಏನಾದರೂ ಹೊಸ ಕ್ರಮವನ್ನು ಸೂಚಿಸಲಿದ್ದಾರೆಯೇ ಎಂಬ ಬಗ್ಗೆ ಕುತೂಹಲಗಳು ಎದ್ದಿವೆ. ಇದರ ಜತೆಗೆ ಹಿಂದಿನ ಆರು ವರ್ಷಗಳಲ್ಲಿ ಪ್ರಧಾನಿ ಮಾಡಿದ್ದ ಭಾಷಣ ಪ್ರಮುಖಾಂಶಗಳ ಹಿನ್ನೋಟ ನೀಡಲಾಗಿದೆ.

Advertisement

2014
ಭಾರತದಲ್ಲಿಯೇ ಉತ್ಪಾದನೆ ಮಾಡುವ ನಿಟ್ಟಿನಲ್ಲಿ “ಮೇಕ್‌ ಇನ್‌ ಇಂಡಿಯಾ ಘೋಷಣೆ
ಪ್ರಧಾನಮಂತ್ರಿ ಜನಧನ್‌ ಯೋಜನೆ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ

2015
ಭ್ರಷ್ಟಾಚಾರ, ಕಪ್ಪುಹಣ ಮತ್ತು ಬಡತನ ನಿರ್ಮೂಲನೆಯ ಪಣ.
ಸ್ಟಾರ್ಟಪ್‌ ಇಂಡಿಯಾ ಘೋಷಣೆ, ಸಮಾನ ಹುದ್ದೆ-ಸಮಾನ ಪಿಂಚಣಿ ಯೋಜನೆಗೆ ಒಪ್ಪಿಗೆ

2016
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರ ಪಿಂಚಣಿ ಮೊತ್ತ ಶೇ.20 ಹೆಚ್ಚಳ
ವಿದ್ಯುದೀಕರಣಗೊಳ್ಳದ 18 ಸಾವಿರ ಗ್ರಾಮಗಳ ಪೈಕಿ 10 ಸಾವಿರ ಗ್ರಾಮಗಳಿಗೆ ವಿದ್ಯುದೀಕರಣ ಕಾರ್ಯ ಪೂರ್ಣ.

2017
ಹೆಚ್ಚು ಡಿಜಿಟಲ್‌ ವಹಿವಾಟು ಮೂಲಕ ನಗದುರಹಿತ ಆರ್ಥಿಕತೆ ಸೃಷ್ಟಿಸಲು ಕರೆ
1942ರಲ್ಲಿ ದೇಶವು ಭಾರತ ಬಿಟ್ಟು ತೊಲಗಿ ಎಂಬ ಕರೆ ನೀಡಿತ್ತು. ಈಗ ಭಾರತವನ್ನು ಒಂದಾಗಿಸಿ ಎಂದು ಕರೆ ನೀಡಬೇಕಿದೆ.

Advertisement

2018
2022ರಲ್ಲಿ ಭಾರತೀಯ ಗಗನಯಾತ್ರಿಯನ್ನು ಬಾಹ್ಯಾಕಾಶ ಕಳುಹಿಸುವ ನಿರ್ಧಾರ ಪ್ರಕಟ
ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಲೋಕಾರ್ಪಣೆ ಬಗ್ಗೆ ಘೋಷಣೆ

2019
ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೆ ಪೈಪ್‌ ಮೂಲಕ ಕುಡಿಯುವ ನೀರು
ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆ ರಚನೆ ಕುರಿತು ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next