ಲಕ್ನೋ: ಉತ್ತರಪ್ರದೇಶದ ವಾರಾಣಸಿಯಲ್ಲಿ ಮಾಡಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿ.13ರಂದು ಉದ್ಘಾಟಿಸಲಿದ್ದಾರೆ.
800 ಕೋಟಿ ರೂ. ಮೌಲ್ಯದ ಕಾರಿಡಾರ್ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಪೈಕಿ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಲಾಗುತ್ತದೆ. ಯೋಜನೆಯ ಮೊದಲ ಹಂತದಲ್ಲಿ ವಿಶ್ವನಾಥ ದೇಗುಲ ಆವರಣದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಎರಡನೇ ಹಂತದಲ್ಲಿ ಗಂಗಾ ನದಿ ಸುತ್ತಲಿನ ಕಾಮಗಾರಿ ನಡೆಯಲಿದ್ದು, ಅದು ಮುಂದಿನ ವರ್ಷದ ಜನವರಿ ವೇಳೆಗೆ ಸಂಪೂರ್ಣಗೊಳ್ಳಲಿದೆ ಎಂದು ಯೋಜನೆಯ ವಿನ್ಯಾಸಗಾರ ಬಿಮಲ್ ಪಟೇಲ್ ಪಟೇಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!
ಈ ಯೋಜನೆಯು ದೇಗುಲದ ಚೌಕ್, ವಾರಾಣಸಿ ನಗರ ಗ್ಯಾಲರಿ, ವಸ್ತುಸಂಗ್ರಹಾಲಯ, ಆಡಿಟೋರಿಯಂ, ಸಭಾಂಗಣ, ಭಕ್ತರಿಗೆ ಅನುಕೂಲ ಕೇಂದ್ರ, ಆಧ್ಯಾತ್ಮಿಕ ಪುಸ್ತಕ ಕೇಂದ್ರ ಸೇರಿ ಅನೇಕ ಕಾಮಗಾರಿಯನ್ನು ಒಳಗೊಂಡಿದೆ.