Advertisement

ರಫೇಲ್‌ ಭೀತಿಯಲ್ಲಿ ಸಿಬಿಐ ನಿರ್ದೇಶಕರನ್ನು ಕಿತ್ತ ಪ್ರಧಾನಿ : ರಾಹುಲ್

07:13 PM Oct 25, 2018 | Team Udayavani |

ಹೊಸದಿಲ್ಲಿ : ”ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್‌ ಹಗರಣದ ಬಗ್ಗೆ ಪ್ರಕೃತ ನಡೆಯುತ್ತಿರುವ ತನಿಖೆಯ ಬಗ್ಗೆ ಭಯಭೀತರಾಗಿದ್ದಾರೆ. ತನ್ನನ್ನು ಉಳಿಸಿಕೊಳ್ಳುವುದಕ್ಕಾಗಿ ಅವರು ಸಿಬಿಐ ನಿರ್ದೇಶಕ ಆಲೋಕ್‌ ವರ್ಮಾ ವಿರುದ್ಧ ಕ್ರಮತೆಗೆದುಕೊಂಡಿದ್ದಾರೆ ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

Advertisement

“ಪ್ರಧಾನಿ ಮೋದಿ ಅವರು ಸಿಬಿಐ ಮುಖ್ಯಸ್ಥ ಆಲೋಕ್‌ ವರ್ಮಾ ವನ್ನು ನಟ್ಟನಡು ರಾತ್ರಿಯ ವೇಳೆ ಹುದ್ದೆಯಿಂದ ಕಿತ್ತು ಹಾಕಿದರು.ವರ್ಮಾ ಅವರು ಇನ್ನೇನು ರಫೇಲ್‌ ಡೀಲ್‌ ಬಗ್ಗೆ ತನಿಖೆಯನ್ನು ಆರಂಭಿಸುವುದಿದ್ದರು. ಇದರಿಂದ ಭೀತರಾದ ಮೋದಿ ತನ್ನನ್ನು ಉಳಿಸಿಕೊಳ್ಳಲು ವರ್ಮಾ ಅವರನ್ನು ರಾತ್ರೋರಾತ್ರಿ ಹುದ್ದೆಯಿಂದ ಕಿತ್ತು ಹಾಕಿದರು” ಎಂದು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಹೇಳಿದರು. 

“ಸಾಮಾನ್ಯವಾಗಿ ಸಿಬಿಐ ನಿರ್ದೇಶಕರ ನೇಮಕಾತಿ ಮತ್ತು ಪದಚ್ಯುತಿಯನ್ನು ಪ್ರಧಾನಿ, ಸಿಜೆಐ ಮತ್ತು ವಿಪಕ್ಷ ನಾಯಕ ಸೇರಿದಂತೆ ಇರುವ ಮೂವರು ಸದಸ್ಯರ ಸಮಿತಿಯು ಮಾಡುತ್ತದೆ. ಆದರೆ ರಾತ್ರಿ 2 ಗಂಟೆಯ ವೇಳೆ ಪ್ರಧಾನಿ ಮೋದಿ ಅವರೇ ಈ ಕೆಲಸ ಮಾಡಿದರು. ಇದು ಸಂವಿಧಾನಕ್ಕೆ ಮಾಡಿರುವ ಅವಮಾನ; ಅದೇ ರೀತಿ ಸಿಜೆಐ ಮತ್ತು ದೇಶದ ಜನರಿಗೆ ಮಾಡಿರುವ ಅವಮಾನ, ಇದೊಂದು ಕಾನೂನು ಬಾಹಿರ ಮತ್ತು ಕ್ರಿಮಿನಲ್‌ ಕ್ರಮವಾಗಿದೆ” ಎಂದು ರಾಹುಲ್‌ ಗುಡುಗಿದರು. 

”ಪ್ರಧಾನಿ ಮೋದಿ ಅವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖ್ಯಸ್ಥ, “ಪ್ರಧಾನಿ ಅವರ ಪ್ರತಿಕ್ರಿಯೆ ಭಯಭೀತಿಯದ್ದಾಗಿದೆ; ಅವರಿಗೆ ತಾನು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಬಗ್ಗೆ ಮತ್ತು ತಾನು ಹಿಡಿಯಲ್ಪಟ್ಟೇನು ಎಂಬ ಬಗ್ಗೆ ಭಯವಿದೆ ” ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next