Advertisement

ಪೋರ್ಚುಗಲ್‌ನಲ್ಲಿ ಮೋದಿಗೆ ಸ್ವಾಗತ: ಪ್ರಧಾನಿ ಅಂಟೋನಿಯೋ ಕೋಸ್ಟಾ ಭೇಟಿ

07:46 PM Jun 24, 2017 | Team Udayavani |

ಲಿಸ್‌ಬನ್‌ : ತ್ರಿರಾಷ್ಟ್ರ ಪ್ರವಾಸದ ಅಂಗವಾಗಿ ಮೊದಲ ಹಂತದಲ್ಲಿ ಪೋರ್ಚುಗಲ್‌ಗೆ ಇಂದು ಶನಿವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪೋರ್ಚುಗೀಸ್‌ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರನ್ನು ಭೇಟಿಯಾದರು. 

Advertisement

ವಿಮಾನ ನಿಲ್ದಾಣದಲ್ಲಿ ಪೋರ್ಚುಗೀಸ್‌ ವಿದೇಶ ಸಚಿವ ಆಗಸ್ಟೋ ಸ್ಯಾಂಟಸ್‌ ಸಿಲ್ವಾ ಅವರು ಪ್ರಧಾನಿ ಮೋದಿಯನ್ನು ಬರ ಮಾಡಿಕೊಂಡರು. ಭಾರತೀಯ ಪ್ರಧಾನಿಯೊಬ್ಬರ ಐರೋಪ್ಯ ದೇಶದ ಮೊತ್ತ ಮೊದಲ ದ್ವಿಪಕ್ಷೀಯ ಸಂದರ್ಶನ ಇದಾಗಿರುವುದು ಗಮನಾರ್ಹವಾಗಿದೆ. 

ಉಭಯ ರಾಷ್ಟ್ರಗಳ ನಾಯಕರು ವಿವಿಧ ಕ್ಷೇತ್ರಗಳಲ್ಲಿನ ಜಂಟಿ ಯೋಜನೆಗಳ ಪ್ರಗತಿಯನ್ನು ಅವಲೋಕಿಸುವರಲ್ಲದೆ ಹೊಸ ಯೋಜನೆಯಗಳ ನಿರ್ಧಾರಗಳನ್ನು ತೆಗೆದುಕೊಳ್ಳುವರು ಎಂದು ಮೂಲಗಳು ತಿಳಿಸಿವೆ. 

ಪೋರ್ಚುಗೀಸ್‌ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರು ಮೂಲತಃ ಭಾರತದ ಗೋವೆಯವರಾಗಿದ್ದು ಈ ವರ್ಷ ಜನವರಿಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next