Advertisement

ಸೆ.8ರಂದು ಸೆಂಟ್ರಲ್‌ ವಿಸ್ತಾ ಅವೆನ್ಯೂ ಉದ್ಘಾಟಿಸಲಿರುವ ಮೋದಿ

10:04 PM Sep 04, 2022 | Team Udayavani |

ನವದೆಹಲಿ: ದೆಹಲಿಯ ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ನವೀಕರಿಸಲಾದ ಸೆಂಟ್ರಲ್‌ ವಿಸ್ತಾ ಅವೆನ್ಯೂ ಅನ್ನು ಪ್ರಧಾನಿ ನರೇಂದ್ರ ಮೋದಿ ಸೆ.8ರಂದು ಉದ್ಘಾಟಿಸಲಿದ್ದಾರೆ.

Advertisement

ಸುಮಾರು 1.1 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾದ ಮಾರ್ಗವು ಕೆಂಪು ಬಣ್ಣದ ಗ್ರಾನೈಟ್‌ನಿಂದ ನಿರ್ಮಿಸಲಾದ ನಡಿಗೆ ಪಥ, ಮಾರ್ಗದುದ್ದಕ್ಕೂ 133ಕ್ಕೂ ಹೆಚ್ಚು ಬೀದಿ ದೀಪಗಳು, 4,087 ಮರಗಳು ಮತ್ತು 114 ಅಧುನಿಕ ನಾಮಫ‌ಲಕಗಳು ಮತ್ತು ತೋಟಗಳನ್ನು ಹೊಂದಿದೆ. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸೆಂಟ್ರಲ್‌ ವಿಸ್ತಾ ಪುನರ್‌ಅಭಿವೃದ್ಧಿ ಯೋಜನೆಯ ಮೊದಲ ಕಾಮಗಾರಿ ಇದಾಗಿದೆ.

“ಯೋಜನೆಯಡಿಯಲ್ಲಿ ನಡಿಗೆದಾರರಿಗೆ ಅನುಕೂಲವಾಗುವಂತೆ 4 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಇಡೀ ಆವರಣದಲ್ಲಿ 422 ಕೆಂಪು ಗ್ರಾನೈಟ್‌ನ ಆಸನಗಳನ್ನು ನಿರ್ಮಿಸಲಾಗಿದೆ. 300 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 1,117 ಕಾರುಗಳು ಮತ್ತು 35 ಬಸ್‌ಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ,” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next