Advertisement

PM Modi ಚೀನವನ್ನು ಸರಿಯಾಗಿ ನಿಭಾಯಿಸಿಲ್ಲ: ರಾಹುಲ್‌ ಗಾಂಧಿ

11:42 PM Sep 11, 2024 | Team Udayavani |

ವಾಷಿಂಗ್ಟನ್‌: ಭಾರತ ಮತ್ತು ಚೀನ ನಡುವೆ ನಡೆಯುತ್ತಿರುವ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಮೆರಿಕದ ನೆಲದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಚೀನವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

Advertisement

ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಮಂಗಳ ವಾರ ವಾಷಿಂಗ್ಟನ್‌ನ ನ್ಯಾಶನಲ್‌ ಪ್ರಸ್‌ ಕ್ಲಬ್‌ನಲ್ಲಿ ಮಾತ ನಾಡಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಡಾಖ್‌ನಲ್ಲಿ ದಿಲ್ಲಿಗಿಂತಲೂ ಹೆಚ್ಚು ವಿಸ್ತೀರ್ಣದ ಭೂಪ್ರದೇಶವನ್ನು ಚೀನ ಆಕ್ರಮಿಸಿಕೊಂಡಿದೆ. ಇದೊಂದು ದುರ್ದೈವ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ನೆರೆಯ ರಾಷ್ಟ್ರ ಚೀನವನ್ನು ನಿಭಾಯಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫ‌ಲ ವಾಗಿದೆ. ಸುಮಾರು 4 ಸಾವಿರ ಚ.ಕಿ.ಮೀ.ನಷ್ಟು ಭೂಪ್ರದೇಶವನ್ನು ಚೀನ ಆಕ್ರಮಿಸಿಕೊಂಡಿದೆ. ಒಂದು ವೇಳೆ ಅಮೆರಿಕದ ಇಷ್ಟೇ ಭೂಪ್ರದೇಶವನ್ನು ನೆರೆಯ ದೇಶ ಆಕ್ರಮಿಸಿಕೊಂಡಿದ್ದರೆ ಅಮೆರಿಕ ಏನು ಮಾಡುತ್ತಿತ್ತು? ಅಮೆರಿಕದ ಯಾವ ಅಧ್ಯಕ್ಷರಾದರೂ ನಾವು ಇದನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆ ಎಂದು ಹೇಳಿ ಸುಮ್ಮ ನಾಗುತ್ತಿದ್ದರೇ ಎಂದು ಅವರು ಪ್ರಶ್ನಿಸಿದ್ದಾರೆ.

ಪಾಕ್‌ ಭಯೋತ್ಪಾದನೆಗೆ ಅವಕಾಶ ಕೊಡುವುದಿಲ್ಲ
ಭಾರತದಲ್ಲಿ ಭಯೋತ್ಪಾದನ ಕೃತ್ಯಗಳನ್ನು ನಡೆಸಲು ನಾವು ಅವಕಾಶ ನೀಡುವುದಿಲ್ಲ. ಇಂತಹ ಕೃತ್ಯಗಳನ್ನು ಎಸಗುವುದನ್ನು ಪಾಕ್‌ ನಿಲ್ಲಿಸುವವರೆಗೆ ನಾವು ಅವರ ಜತೆಗೆ ಉತ್ತಮ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ರಾಹುಲ್‌ ಹೇಳಿದ್ದಾರೆ.

Advertisement

ಅಮೆರಿಕ ಮೂಗು ತೂರಿಸಬಾರದು: ರಾಹುಲ್‌
ಭಾರತದ ಆಂತರಿಕ ವಿಷಯಗಳಲ್ಲಿ ಅಮೆರಿಕ ಮೂಗು ತೂರಿಸಬಾರದು. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದೆ. ಪ್ರಜಾಪ್ರಭುತ್ವ ಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಹೋರಾಟ ಭಾರತದ್ದೇ ಆಗಿದೆ. ಉಳಿದ ದೇಶಗಳ ಪ್ರಜಾಪ್ರಭುತ್ವಕ್ಕೆ ಹೋಲಿಸಿದರೆ ಭಾರತದ್ದು ವಿಭಿನ್ನವಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.

ಭಾರತ ವಿರೋಧಿ ನಾಯಕಿ
ಭೇಟಿ: ರಾಹುಲ್‌ ವಿವಾದ
ಅಮೆರಿಕದಲ್ಲಿ ರಾಹುಲ್‌ ಗಾಂಧಿ ಅಮೆರಿಕದ ಸಂಸದೆ ಇಲ್ಹಾನ್‌ ಓಮರ್‌ ಅವರನ್ನು ಭೇಟಿಯಾಗಿರು ವುದು ಭಾರೀ ವಿವಾದ ಸೃಷ್ಟಿಸಿದೆ. ಭಾರತ ವಿರೋಧಿ, ಮೋದಿ ವಿರೋಧಿ ಮತ್ತು ತೀವ್ರವಾದಿ ರಾಜಕಾರಣಿ ಇಲ್ಹಾನ್‌ ಓಮರ್‌ ಅವರನ್ನು ರಾಹುಲ್‌ ಏಕೆ ಭೇಟಿ ಯಾಗಿದ್ದಾರೆ ಎಂದು ಬಿಜೆಪಿ ಪ್ರಶ್ನಿ ಸಿದೆ. ಬಿಜೆಪಿಯನ್ನು ವಿರೋಧಿಸುವು ದಕ್ಕಾಗಿ ದೇಶವನ್ನು ವಿರೋಧಿಸು ವುದು ಸರಿಯೇ ಎಂದು ಬಿಜೆಪಿ ಕೇಳಿದೆ. ಸಿಕ್ಖರ ವಿರುದ್ಧ ವಿಷಮಯ ಹೇಳಿಕೆ ಮತ್ತು ವಿದೇಶಿ ನೆಲದಲ್ಲಿ ಭಾರತವನ್ನು ಹೀಯಾಳಿಸಿದ ಬಳಿಕ ರಾಹುಲ್‌ ಈಗ ಭಾರತ ವಿರೋಧಿ ಇಲ್ಹಾನ್‌ ಓಮರ್‌ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲ ಹೇಳಿದ್ದಾರೆ. ಓಮರ್‌ ಅಮೆರಿಕದ ಸಂಸತ್ತಿನಲ್ಲಿ ಭಾರತ ವಿರೋಧಿ ನಿರ್ಣಯ ಮಂಡಿಸಿ ದ್ದರು, 370ನೇ ವಿಧಿ ರದ್ದತಿ ವಿರೋ ಧಿಸಿದ್ದರು, ಅವರೊಬ್ಬ ಹಿಂದೂ ದ್ವೇಷಿ, ಅಂಥವರನ್ನು ರಾಹುಲ್‌ ಭೇಟಿಯಾಗಿದ್ದಾರೆ ಎಂದಿದ್ದಾರೆ.

ರಾಹುಲ್‌ ಮೀಸಲಾತಿ ಹೇಳಿಕೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ
ಬೆಂಗಳೂರು: ಮೀಸಲಾತಿ ರದ್ದುಗೊಳಿಸುವ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಮೆರಿಕದಲ್ಲಿ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಗುರುವಾರ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಮೀಸಲು ಹೇಳಿಕೆ: ಸೋನಿಯಾ ನಿವಾಸದ ಮುಂದೆ ಸಿಕ್ಖರ ಆಕ್ರೋಶ
ಹೊಸದಿಲ್ಲಿ: ಭಾರತದಲ್ಲಿ ಸಿಕ್ಖರು ಹೊಂದಿರುವ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದಲ್ಲಿ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗೆ ಬಿಜೆಪಿ ಬೆಂಬಲಿತ ಸಿಕ್ಖರ ಗುಂಪು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬುಧವಾರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ದಿಲ್ಲಿ ನಿವಾಸದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ, ರಾಹುಲ್‌ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಮೆರಿಕದಲ್ಲಿ ರಾಹುಲ್‌ ನೀಡಿರುವ ಹೇಳಿಕೆಯು ಕಾಂಗ್ರೆಸ್‌ನ ಮೀಸಲು ವಿರೋಧಿ ಮುಖವನ್ನು ಮತ್ತೂಮ್ಮೆ ಜಗಜ್ಜಾಹೀರು ಮಾಡಿದೆ. ಬಿಜೆಪಿ ಇರುವವರೆಗೆ ಮೀಸಲಾತಿಯನ್ನು ರದ್ದು ಮಾಡಲು ಸಾಧ್ಯವಿಲ್ಲ. ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡಲು ಬಿಡುವುದಿಲ್ಲ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.