Advertisement
ವ್ಯೂಹಾತ್ಮಕವಾಗಿ ಪ್ರಾಮುಖ್ಯ ಪಡೆದಿರುವ ಲಡಾಖ್ ಪ್ರದೇಶಕ್ಕೆ ಈ ಸುರಂಗವು ವರ್ಷಪೂರ್ತಿ ಸಂಪರ್ಕ ಕಲ್ಪಿಸಲಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಸುರಂಗ ಲೋಕಾರ್ಪಣೆ ಬಳಿಕ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪಾಕ್, ಚೀನ ಜತೆ ಲಡಾಖ್ ಗಡಿ ಹಂಚಿಕೊಂಡಿರುವ ಕಾರಣ ಈ ಸುರಂಗವು ರಾಷ್ಟ್ರೀಯ ಭದ್ರತೆ ನಿಟ್ಟಿ ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಸುರಂಗ ಹಾಗೂ ನಿರ್ಮಾಣ ಹಂತದಲ್ಲಿರುವ ಝೋಜಿಲಾ ಸುರಂಗವು ಭವಿಷ್ಯದಲ್ಲಿ ಲಡಾಖ್‌ಗೆ ಸರ್ವಋತು ಸಂಪರ್ಕ ಒದಗಿಸಲಿದೆ. ನಾಗರಿಕರು ಮತ್ತು ಸೇನಾ ಸಂಚಾರ (ಸೇನಾ ಸಿಬಂದಿ, ಸಲಕರಣೆಗಳು ಹಾಗೂ ಇತರ ಪೂರೈಕೆಗಳು)ಕ್ಕೆ ಇದರಿಂದ ಅನುಕೂಲ ಆಗಲಿದೆ. ಜತೆಗೆ, ದೇಶದ ಉಳಿದ ಭಾಗಗಳ ಜತೆ ಲಡಾಖ್ ಸಂಪರ್ಕ ಹೊಂದಲು, ಆ ಮೂಲಕ ವ್ಯಾಪಾರ-ವಹಿವಾಟು ಹೆಚ್ಚಿಸಿಕೊಳ್ಳಲು ಸಾಧ್ಯವಾ ಗಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.