Advertisement
ಭಾರತದಲ್ಲಿ ಬ್ಯಾಂಕ್‌ಗಳಿಗೆ ವಂಚಿಸಿ, ಬೇರೆ ದೇಶಗಳಿಗೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿಯಂಥ ಆರ್ಥಿಕ ಅಪರಾಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಖಡಕ್ ಎಚ್ಚರಿಕೆಯಿದು.
Related Articles
Advertisement
ಕ್ರಿಪ್ಟೋ ಕರೆನ್ಸಿ ಯುವಕರನ್ನು ಹಾಳುಮಾಡುತ್ತಿದೆ. ದುರುಪಯೋಗ ಮಾಡುವವರ ಕೈಗೆ ಕ್ರಿಪ್ಟೋ ಸಿಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ ಗುರುವಾರ ಆಯೋಜಿಸಿದ್ದ “ಸಿಡ್ನಿ ಡಯಲಾಗ್’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಪ್ರಜಾಸತ್ತಾತ್ಮಕ ರಾಷ್ಟ್ರಗಳು ಒಟ್ಟು ಸೇರಿ ಕ್ರಿಪ್ಟೋ ಕರೆನ್ಸಿ ದುರುಪಯೋಗವಾಗದಂತೆ ತಡೆಯಬೇಕಾಗಿದೆ ಎಂದಿದ್ದಾರೆ. ನ.29ರಂದು ಶುರುವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ನಿಯಂತ್ರಿಸುವ ಬಗ್ಗೆ ಮಸೂದೆ ಮಂಡಿಸಲಿರು ವಂತೆಯೇ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.
ತಂತ್ರಜ್ಞಾನ ಮತ್ತು ಡೇಟಾ (ಮಾಹಿತಿ) ಇತ್ತೀಚಿನ ವರ್ಷಗಳಲ್ಲಿ ಹೊಸ ಆಯುಧಗಳಾಗಿ ಪರಿವರ್ತನೆಯಾಗಿವೆ. ಅವುಗಳನ್ನು ಸಹಕಾರಕ್ಕೆ ಬಳಸಬೇಕೋ, ಸಂಘರ್ಷಕ್ಕೆ ಬಳಸಬೇಕೋ ಜಗಳ ಮತ್ತು ಬಲವಂತಕ್ಕೆ ಬಳಕೆ ಮಾಡಬೇಕೋ ಎಂಬ ವಿಚಾರ ಆಯಾಯ ದೇಶಗಳು ಮಾಡುವ ಆಯ್ಕೆಯನ್ನು ಅವಲಂಬಿಸಿದೆ ಎಂದೂ ಮೋದಿ ಹೇಳಿದ್ದಾರೆ. ಪ್ರಜಾಸತ್ತಾತ್ಮಕ ದೇಶಗಳು ಭವಿಷ್ಯದ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೂಡಿಕೆ ಮಾಡಬೇಕು, ನಂಬಿಕರ್ಹ ಉತ್ಪಾದನ ಮತ್ತು ಪೂರೈಕೆ ವ್ಯವಸ್ಥೆ ಸೃಷ್ಟಿಸಬೇಕು, ಸಾರ್ವಜನಿಕ ಅಭಿಪ್ರಾಯಗಳ ತಿರುಚುವಿಕೆಗೆ ಕಡಿವಾಣ ಹಾಕಲು ಶ್ರಮಿಸಬೇಕು ಎಂದೂ ಪ್ರಧಾನಿ ಹೇಳಿದ್ದಾರೆ. ಭಾರತದ ವಿರುದ್ಧ ಚೀನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡುವತ್ತ ದೃಷ್ಟಿಹರಿಸಿರುವ ಹಿನ್ನೆಲೆಯಲ್ಲಿ ಈ ಮಾತುಗಳು ಮಹತ್ವ ಪಡೆದಿವೆ.