Advertisement

ರಾಮಮಂದಿರಕ್ಕೆ ಭಾರೀ ಬೇಡಿಕೆ! ಪ್ರಧಾನಿ ಉಡುಗೊರೆ ಹರಾಜು; ಒಂದೇ ದಿನ 14 ಮಂದಿ ಬಿಡ್ಡಿಂಗ್‌

11:19 AM Sep 19, 2022 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿರುವ ಉಡುಗೊರೆಗಳ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮಾದರಿಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.

Advertisement

ಒಟ್ಟು 1,200ರಷ್ಟು ಉಡುಗೊರೆಗಳು ಹರಾಜಿನಲ್ಲಿದ್ದು, ಅ. 2ರ ವರೆಗೆ ನಡೆಯಲಿದೆ. ಮೊದಲ ಎರಡು ದಿನವೇ ಸಾಕಷ್ಟು ಮಂದಿ ಭಾಗವಹಿಸಿದ್ದು, ರಾಮಮಂದಿರದ ಮಾದರಿ, ಪ್ರಧಾನಿ ಮೋದಿಯವರ ಎನ್‌ಸಿಸಿ ಅಲುಮ್ನಿ ಕಾರ್ಡ್‌, ತಿರುಪತಿ ಬಾಲಾಜಿ ವಿಗ್ರಹ, ಇಡಗುಂಜಿ ಮಹಾ ಗಣಪತಿ ದೇವರ ಮೂರ್ತಿಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.

ವಿಧಾನಸೌಧದ ಮಾದರಿಗೆ 21,600 ರೂ. ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಪ್ರಧಾನಿಗೆ ಉಡುಗೊರೆ ನೀಡಿದ್ದ ಸುಭಾಷ್‌ಚಂದ್ರ ಬೋಸ್‌ ಪ್ರತಿಮೆಯೂ ಹರಾಜಿನಲ್ಲಿದೆ. ಅದರ ಮೂಲ ಬೆಲೆ 5 ಲಕ್ಷ ರೂ.ಗಳಾಗಿದ್ದು, ಈಗಾಗಲೇ 5.51 ಲಕ್ಷಕ್ಕೆ ಬಿಡ್‌ ಮಾಡಲಾಗಿದೆ. ತಿರುಪತಿ ಬಾಲಾಜಿ ವಿಗ್ರಹ ಖರೀದಿಗೆ ಒಂದೇ ದಿನದಲ್ಲಿ 31 ಮಂದಿ ಮುಂದೆ ಬಂದಿದ್ದಾರೆ.

21,600 ರೂ. ಮೂಲ ಬೆಲೆ ನಿಗದಿ ಪಡಿಸಿದ್ದರೂ, ಗರಿಷ್ಠ ಬಿಡ್ಡಿಂಗ್‌ 1.91 ಲಕ್ಷ ರೂ.ಗೆ ತಲುಪಿದೆ. //pmmementos.gov.inವೆಬ್‌ಸೈಟ್‌ನಲ್ಲಿ ಹರಾಜು ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next