Advertisement

ನೀವು ನನಗೆ ಸ್ಫೂರ್ತಿ: ಯೋಧರೊಂದಿಗೆ ಮೋದಿ ದೀಪಾವಳಿ

03:31 PM Oct 19, 2017 | |

ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತೀ ವರ್ಷದಂತೆ ಈ ವರ್ಷವೂ ಯೋಧರ ಜೊತೆ ದೀಪಾವಳಿ ಆಚರಿಸಿದ್ದು,ಈ ಬಾರಿ ಗುರೇಜ್‌ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ಸಂಭ್ರಮಿಸಿದರು.

Advertisement

ಗುರುವಾರ ಬಂಡಿಪೋರಾ ಜಿಲ್ಲೆಯಲ್ಲಿರುವ ಗುರೇಜ್‌ ಸೆಕ್ಟರ್‌ನಲ್ಲಿ  ಸೇನಾ ಪಡೆಗಳೊಂದಿಗೆ ಸಿಹಿ ಹಂಚಿಕೊಂಡು ಪರಸ್ಪರ ಶುಭಾಶಯ ಕೋರಿದರು.ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಮೋದಿ ಅವರ ಜೊತೆಗೂಡಿದ್ದರು. 

‘ಯೋಧರು ನನ್ನ ಕುಟುಂಬದ ಸದಸ್ಯರು. ಕುಟುಂಬದ ಸದಸ್ಯರೊಂದಿಗೇ ದೀಪಾವಳಿ ಆಚರಿಸಿದಷ್ಟು ಖುಷಿಯಾಗಿದೆ. ನನಗೆ ನೀವೆ ಸ್ಫೂರ್ತಿ. 125 ಕೋಟಿ ಜನರು ಸಂಭ್ರಮದಿಂದ ದೀಪಾವಳಿ ಆಚರಿಸಲು ನಿಮ್ಮ ತ್ಯಾಗ ಅಪಾರವಾಗಿದೆ.ನಿಮ್ಮ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನಿಮ್ಮನ್ನು ಭೇಟಿಯಾದಾಗೆಲ್ಲಾ ನನಗೆ ಹೊಸ ಉತ್ಸಾಹ ದೊರಕುತ್ತದೆ. ಸೈನಿಕರೂ ನ್ಯೂ ಇಂಡಿಯಾದ ಒಂದು ಭಾಗ. ಎಲ್ಲಾ ಯೋಧರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ’ಎಂದು ಪ್ರಧಾನಿ ಯೋಧರನ್ನುದ್ದೇಶಿಸಿ ಮಾತನಾಡಿರುವುದಾಗಿ ವರದಿಯಾಗಿದೆ. 

2014 ರಲ್ಲಿ ಅಧಿಕಾರಕ್ಕೆ ಬಂದ ವರ್ಷ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಮೋದಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next