Advertisement

ರುವಾಂಡಕ್ಕೆ ತೆರಳಿದ ಮೋದಿ

06:00 AM Jul 24, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಐದು ದಿನಗಳ ಅವಧಿಯ ಮೂರು ರಾಷ್ಟ್ರಗಳ ಪ್ರವಾಸ ಸೋಮವಾರ ಮಧ್ಯಾಹ್ನ ಆರಂಭಗೊಂಡಿದೆ. ಪ್ರಧಾನಿಯೊಂದಿಗೆ 100 ಮಂದಿಯ ಭಾರತೀಯ ಪ್ರತಿನಿಧಿಗಳ ನಿಯೋಗವೊಂದು ತೆರಳಿದೆ. 

Advertisement

ಈ ಭೇಟಿಯ ಮೊದಲ ದಿನ ರವಾಂಡಕ್ಕೆ ಭೇಟಿ ನೀಡಲಿರುವ ಮೋದಿ, ಆ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ರವಾಂಡ ಭೇಟಿಯ ನಂತರ ಜು. 24, 25ರಂದು ಉಗಾಂಡಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು 20 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಉಗಾಂಡಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಇನ್ನು, ಪ್ರವಾಸದ ಕೊನೆಯ ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದು, 25ರಿಂದ 27ರವರೆಗೆ ಜೊಹಾನ್ಸ್‌ಬರ್ಗ್‌ನಲ್ಲಿ ಆಯೋಜಿಸಲಾಗಿರುವ ಬ್ರಿಕ್ಸ್‌ ಮಹಾ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. 

200 ಹಸುಉಡುಗೊರೆ: ತಮ್ಮ ಈ ಮೊದಲ ಭೇಟಿಯಲ್ಲಿ ಮೋದಿ, ರುವಾಂಡದ “ರವೇರು’ ಗ್ರಾಮಕ್ಕೆ ರುವಾಂಡದ ಸ್ಥಳೀಯ ತಳಿಯ 200 ಹಸುಗಳನ್ನು ಉಡುಗೊರೆ ಯಾಗಿ ನೀಡಲಿದ್ದಾರೆ. ಪ್ರತಿಯೊಂದು ಬಡ ಕುಟುಂಬವೊಂದಕ್ಕೆ ಹಸು ವೊಂದನ್ನು ಉಡುಗೊರೆ ನೀಡುವ “ಗಿರಿಂಕಾ’ ಯೋಜನೆಯನ್ನು ರುವಾಂಡ ಅಧ್ಯಕ್ಷರು ಜಾರಿಗೆ ತಂದಿ ದ್ದಾರೆ. ಬಡಕುಟುಂಬ ವೊಂದಕ್ಕೆ ಒಂದು ಹಸುವನ್ನು ಸರಕಾರ ಉಡುಗೊರೆಯಾಗಿ ನೀಡುತ್ತದೆ. ಆ ಹಸುವಿನಿಂದ ಜನಿಸುವ ಮೊದಲ ಕರು ಹೆಣ್ಣಾಗಿದ್ದರೆ ಆ ಕರುವನ್ನು ಆ ಕುಟುಂಬ ನೆರೆಮನೆಯವರಿಗೆ ಉಡುಗೊರೆಯಾಗಿ ನೀಡುವುದು ಈ ಯೋಜನೆಯ ವಿಶೇಷ. ಈ ಯೋಜನೆಗೆ ಪ್ರಧಾನಿ ಮೋದಿ ತಮ್ಮ ಸಹಾಯಹಸ್ತ ಚಾಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next