ನಗರದಲ್ಲಿ ಉದಯವಾಣಿಯೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ 31,171 ರೈತರ ಪೈಕಿ 19,387 ರೈತರಿಗೆ ಆರು ಹಂತದಲ್ಲಿ ಪಿಎಂ ಕಿಸಾನ್ ಯೋಜನೆ ಮೂಲಕ 17.32 ಕೋಟಿ ರೂ.ಪಾವತಿಸಲಾಗಿದ್ದು, ತಾಲೂಕಿನಲ್ಲಿ ಮೃತಪಟ್ಟಿರುವ 3,476
ರೈತರು, ಕೃಷಿ ಚಟುವಟಿಕೆಗಳಿಂದ ದೂರ ಉಳಿದಿರುವ 7,200 ರೈತರು ಹಾಗೂ 1,107 ಜನರನ್ನು ಅನರ್ಹರು ಎಂದು ಪರಿಗಣಿಸಲಾಗಿದೆ ಎಂದು ವಿವರಿಸಿದರು.
Advertisement
ತಾಲೂಕಿನಲ್ಲಿ 837 ಎಂಎಂ ಮಳೆ ನಿರೀಕ್ಷಿಸಿದ್ದು, ಆ ಪೈಕಿ 890 ಎಂಎಂ ಮಳೆಯಾಗಿದೆ. ಶೇ.53 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ತಾಲೂಕಿನಲ್ಲಿ 16,611 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಗುರಿ ಮಾಡಲಾಗಿದ್ದು, ಆ ಪೈಕಿ 15,445 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲಾಗಿದೆ ಎಂದು ತಿಳಿಸಿದರು.
80 ಹೆಕ್ಟೇರ್ ಗುರಿ ಇಟ್ಟುಕೊಂಟು ಈಗಾಗಲೇ 27 ಹೆಕ್ಟೇರ್ ಸಾಧನೆ ಮಾಡಲಾಗಿದ್ದು, ಅದರಲ್ಲಿ ಸ್ವೀಟ್ ಕಾರ್ನ್ 15 ಹೆಕ್ಟೇರ್ ಮತ್ತು ಹುರುಳಿ 12 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಲಾಗಿದೆ ಎಂದರು.
Related Articles
ಸಮೀಕ್ಷೆ ಕಾರ್ಯ ನಡೆಸಿ 32.38% ಸಾಧನೆ ಮಾಡಲಾಗಿದ್ದು, ರೈತರು ತಮ್ಮ ತಮ್ಮ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಬೇಕೆಂದು ಈಗಾಗಲೇ ಮನವಿ ಮಾಡಲಾಗಿದೆ. ಇದ ರಿಂದ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ
ಮೂಲಕ ದೊರೆಯುವ ಸೌಲಭ್ಯಗಳು ಪಡೆಯಲು ಅನುಕೂಲವಾಗಲಿದೆ ಎಂದರು.
Advertisement
ಬೆಳೆ ಸಮೀಕ್ಷೆ ವೇಳೆಯಲ್ಲಿ ಬೆಳೆ ನಮೂದನೆ ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಸಹ ಅವ ಕಾಶಗಳಿದ್ದು, ರೈತರು ಸೂಕ್ತ ರೀತಿಯ ಮಾಹಿತಿ ಮತ್ತು ದಾಖಲೆ ನೀಡಿ ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕೋರಿದ್ದಾರೆ.