ಬೀಡ್: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಹೋಗಿಲ್ಲ, ಅಲ್ಲದೆ ಕೇವಲ ಅದರ ಬಗ್ಗೆ ಅಲ್ಪಾವಧಿಗೆ ಮಾತ್ರ ಮಾತನಾಡಿದ್ದಾರೆ ಎಂದು ಹಿರಿಯ ವಿರೋಧ ಪಕ್ಷದ ನಾಯಕ ಶರದ್ ಪವಾರ್ ಹೇಳಿದ್ದಾರೆ.
ಅವರು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರದ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಣಿಪುರದಲ್ಲಿ ಹಳ್ಳಿಗಳು, ಜನರು ಪರಸ್ಪರ ಹಲ್ಲೆ ನಡೆಸುತ್ತಿದ್ದಾರೆ, ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ, ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ರಾಜ್ಯಕ್ಕೆ ಸೇರಿದ್ದು. ಮಣಿಪುರದಲ್ಲಿ “ಡಬಲ್ ಇಂಜಿನ್” ಸರ್ಕಾರವಿದೆ. ಬಿಜೆಪಿ ರಾಜ್ಯವನ್ನೂ ಆಳುತ್ತದೆ. ಆದರೆ ಬಿಜೆಪಿ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಪವಾರ್ ಇಂದು ಟೀಕೆ ಮಾಡಿದರು.
ಇದನ್ನೂ ಓದಿ:Jailer ಸಿನೆಮಾದ `ವರ್ಮಾ’ ಪಾತ್ರಕ್ಕೆ ಮೊದಲ ಆಯ್ಕೆಯಾಗಿದ್ದ ಮಲಯಾಳಂ ಸ್ಟಾರ್ ಮಮ್ಮುಟ್ಟಿ
“ಭಾರತದ ಪ್ರಧಾನಿ ಮಣಿಪುರಕ್ಕೆ ಹೋಗಬೇಕಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಅವರು ಅಧಿವೇಶನದ ಮೊದಲು ಮೂರು ನಿಮಿಷಗಳ ಕಾಲ, ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಕೇವಲ 5 ನಿಮಿಷ ಕಾಲ ಮಣಿಪುರದ ಬಗ್ಗೆ ಮಾತನಾಡಿದರು” ಎಂದು ಅವರು ಬೀಡ್ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದರು.
“ಮಣಿಪುರದ ಮಹಿಳೆಯರ ನೋವು ಪ್ರಧಾನಿಗೆ ಅರ್ಥವಾಗುತ್ತಿಲ್ಲ” ಎಂದು ಪವಾರ್ ಹೇಳಿದರು.