Advertisement

PM Modi ಡಿಗ್ರಿ ವಿಚಾರ: ವಿಚಾರಣೆಯನ್ನು ಮುಂದೂಡಲು ನಿರಾಕರಿಸಿದ ಹೈಕೋರ್ಟ್

03:55 PM Jul 10, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಪದವಿ ಪಡೆದಿದ್ದ ವೇಳೆ, 1978 ರಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡುವಂತೆ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ(DU) ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮುಂದೂಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

Advertisement

ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು ಪ್ರಕರಣದ ಆರಂಭಿಕ ವಿಚಾರಣೆಯನ್ನು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ದೆಹಲಿ ವಿಶ್ವವಿದ್ಯಾಲಯಕ್ಕೆ ನೋಟಿಸ್ ಜಾರಿಗೊಳಿಸಿದರು ಮತ್ತು ಮುಖ್ಯ ಅರ್ಜಿಯಲ್ಲಿ ಈಗಾಗಲೇ ನಿಗದಿಪಡಿಸಿದ ದಿನಾಂಕವಾದ ಅಕ್ಟೋಬರ್ 13 ಕ್ಕೆ ಅದನ್ನು ಪಟ್ಟಿ ಮಾಡಿದರು.2016 ರ ಡಿಸೆಂಬರ್ 21 ರಂದು ಆಯೋಗದ ಆದೇಶಕ್ಕೆ ಜನವರಿ 23, 2017 ರಂದು ಹೈಕೋರ್ಟ್ ತಡೆ ನೀಡಿತ್ತು.

ಕೇಂದ್ರ ಮಾಹಿತಿ ಆಯೋಗದ (CIC) ಆದೇಶಕ್ಕೆ ದೆಹಲಿ ವಿಶ್ವವಿದ್ಯಾಲಯ ಸವಾಲಿನ ಜತೆಗೆ, ಕೆಲವು ಪರೀಕ್ಷೆಗಳ ಫಲಿತಾಂಶಗಳ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಕಾನೂನು ಸಮಸ್ಯೆಗಳನ್ನು ಎತ್ತಿರುವ ಇತರ ಅರ್ಜಿಗಳನ್ನೂ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯ ನಡೆಸಿದ ಬಿಎ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಕಾರ್ಯಕರ್ತ ನೀರಜ್ ಸಲ್ಲಿಸಿದ ಅರ್ಜಿಯ ಮೇಲೆ ಸಿಐಸಿ ಆದೇಶವನ್ನು ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next