Advertisement
ಜವಳಿ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತಉತ್ತೇಜನ ಯೋಜನೆಯಡಿ 10,683 ಕೋಟಿರೂ. ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ನೂಲು, ಬಟ್ಟೆ, ಉಡುಪುಗಳ ತಯಾರಿಕೆ, ಅವುಗಳ ಗುಣಮಟ್ಟ, ಮೌಲ್ಯ ವೃದ್ಧಿ, ಜವಳಿ ವಲಯದ ಗುಣಮಟ್ಟದ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ ಲಾಭವನ್ನು ದೇಶದ ವಿವಿಧ ರಾಜ್ಯಗಳು ಪಡೆದುಕೊಳ್ಳಲು ಉತ್ಸುಕತೆತೋರುತ್ತಿವೆ. ಕರ್ನಾಟಕದಲ್ಲಿ ಜವಳಿ ಉದ್ಯಮಕ್ಕೆ ಹೆಸರಾಗಿದ್ದ ದಾವಣಗೆರೆ ಜಿಲ್ಲೆಗೆ ಇದರ ಲಾಭ ಪಡೆಯಲು ವಿಫುಲ ಅವಕಾಶವಿದ್ದು, ಯೋಜನೆ ಅನುಷ್ಠಾನಕ್ಕೆ ಆಸಕ್ತಿ, ಇಚ್ಛಾಶಕ್ತಿಯ ಅಗತ್ಯತೆ ಇದೆ.
Related Articles
Advertisement
ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಪಿಐಎಲ್ ಯೋಜನೆಯಡಿ ಸರ್ಕಾರ ಕಂಪನಿಗಳ ಉತ್ಪಾದನೆ ಆಧರಿಸಿ ಹಣ ನೀಡುತ್ತದೆ. ಮಾನವ ನಿರ್ಮಿತ ನೂಲಿನ ಬಟ್ಟೆಗಳು, ತಾಂತ್ರಿಕ ವಸ್ತ್ರವಿನ್ಯಾಸ ಉತ್ಪನ್ನ ಸೇರಿದಂತೆ ಆಯ್ದ 10 ವಲಯಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಹೊಸದಾಗಿ ಕಾರ್ಖಾನೆ ಆರಂಭಿಸಲು ಸಹ ಪ್ರೋತ್ಸಾಹಧನ ಸಿಗಲಿದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ.
ಮುಚ್ಚಿರುವ ಕಾಟನ್ ಮಿಲ್‌ಗಳನ್ನು ಪುನಶ್ವೇತನಗೊಳಿಸಿ ಮತ್ತೆ ಜವಳಿ ಉದ್ಯಮವನ್ನು ಉತ್ತುಂಗಕ್ಕೇರಿಸಲು ಕೇಂದ್ರ ಸರ್ಕಾರದ ಈ ಯೋಜನೆ ಸಹಕಾರಿಯಾಗಬಹುದು. ಇದರಿಂದ ಹತ್ತಾರು ಜವಳಿ ಉದ್ಯಮಗಳು ಮತ್ತೆ ಬಾಗಿಲು ತೆರೆದು ಸಾವಿರಾರು ಜನರಿಗೆ ಅದರಲ್ಲೂ ಮಹಿಳೆಯರಿಗೂ ಹೆಚ್ಚಿನ ಉದ್ಯೋಗಾವಕಾಶ ದೊರಕಿಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.
ಮ್ಯಾಂಚೆಸ್ಟರ್ ಆಗಿದ್ದು ಹೇಗೆ?ಮೈಸೂರು ಸಂಸ್ಥಾನದ ಮಾಜಿ ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರು ದಾವಣಗೆರೆ ಮೈಸೂರು ರಾಜ್ಯದ
ಮ್ಯಾಂಚೆಸ್ಟರ್‌ಎಂದು ಹೊಗಳಿದ್ದರು. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಗರ ಹತ್ತಿ ನೂಲಿನ ಬಟ್ಟೆಗೆ ವಿಶ್ವದಲ್ಲಿ ಪ್ರಸಿದ್ಧ ನಗರವಾಗಿತ್ತು. ಅದರಂತೆ ದಾವಣಗೆರೆ ಕೂಡ ರಾಜ್ಯದಲ್ಲಿ ಹತ್ತಿ, ನೂಲು, ಬಟ್ಟೆ ತಯಾರಿಕೆಯಿಂದ ಕರ್ನಾಟಕ, ಭಾರತದಾದ್ಯಂತಪ್ರಸಿದ್ಧಿಯಾಗಿ ಕೈಗಾರಿಕಾ ಕೇಂದ್ರ ಎನ್ನಿಸಿತ್ತು. ದಾವಣಗೆರೆಯ ಲಾಂಗ್ ಕ್ಲಾತ್‌ಬಟ್ಟೆಎಂದರೆ ಎಲ್ಲೆಡೆಪ್ರಸಿದ್ಧಿ ಪಡೆದಿತ್ತು ಬೇಕಿದೆ ಇಚ್ಛಾಶಕ್ತಿ
ಜವಳಿ ಉದ್ಯಮ ಪುನಶ್ಚೇತನಗೊಳಿಸಿ ಗತವೈಭವ ಮರುಕಳಿಸುವಂತೆ ಮಾಡಲು ದಾವಣಗೆರೆಯಲ್ಲಿ ಅವಕಾಶ ಇದೆಯಾದರೂ ಅದಕ್ಕೆ ಇಚ್ಛಾಶಕ್ತಿಯ ಅಷ್ಟೇ ಅಗತ್ಯವಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಈ ಕುರಿತು ಹೆಚ್ಚಿನ ಆಸಕ್ತಿ ತೋರಿದರೆಕೇಂದ್ರ ಸರ್ಕಾರ ಜವಳಿ ಕ್ಷೇತ್ರಕ್ಕೆ ವಿಸ್ತರಿಸಿದ ಪಿಎಲ್‌ಐಯೋಜನೆಯ ಲಾಭ ಪಡೆಯಬಹುದಾಗಿದೆ ಜವಳಿ ಕ್ಷೇತ್ರಕ್ಕೆವಿಸ್ತರಿಸಿದ ಪಿಎಲ್‌ಐ ಯೋಜನೆ ಒಂದು ಉತ್ತಮ ಪ್ಯಾಕೇಜ್.ಅದರ ಮಾರ್ಗಸೂಚಿಗಳು ಇನ್ನೂ ಬರಬೇಕಿದೆ.ಈ ಯೋಜನೆಯಿಂದ ಉದ್ಯಮ ಅಭಿವೃದ್ಧಿಗೊಳಿಸಲು ಹಾಗೂ ಮುಚ್ಚಿರುವ ಉದ್ಯಮ ಪುನರ್ ಆರಂಭಿಸಲು ಅನುಕೂಲವಾಗುವ ನಿರೀಕ್ಷೆಇದೆ.ಈ
ಯೋಜನೆಯಿಂದ ಅತ್ಯಾಧುನಿಕ ಯಂತ್ರೋಪಕರಣ ಖರೀದಿಸಲು, ರಫ್ತು ಗುಣಮಟ್ಟದಉತ್ಪನ್ನ ತಯಾರಿಕೆಗೆ ಸಹಕಾರಿಯಾಗಬಹುದು. ಕಾರ್ಮಿಕರ ವಿಭಾಗದಲ್ಲಿ ಸರ್ಕಾರದಿಂದ ವಿಶೇಷ ಭತ್ಯೆ ಸಿಗುವ ಸಾಧ್ಯತೆ ಇದ್ದು,ಉದ್ದಿಮೆಗಳನ್ನುಪುನಶ್ಚೇತನಗೊಳಿಸಲು ಸಹಕಾರಿಯಾಗುವ ಆಶಾಭಾವವಿದೆ.
-ಮಂಜುನಾಥ ನಾಯ್ಕ, ಜವಳಿ ಉದ್ಯಮಿ, ಬಂಜಾರ ಗಾರ್ಮೆಂಟ್ಸ್
-ಎಚ್.ಕೆ. ನಟರಾಜ