Advertisement

ಪಾಲಿಹೌಸ್‌ ತರಕಾರಿ ಕೃಷಿಯ ಸುಖ ದುಃಖ

11:25 AM Feb 26, 2018 | Harsha Rao |

ದೊಡ್ಡ ಸಭಾಭವನದಂತಿತ್ತು ಎಂ.ರಾಮಚಂದ್ರ ಪೈ ಅವರ ಅರ್ಧ ಎಕರೆ ವಿಸ್ತೀರ್ಣದ ಆ ಪಾಲಿಹೌಸ್‌. ಮೊನ್ನೆ ಫೆಬ್ರವರಿ 15ರಂದು  ಉಡುಪಿ ಜಿÇÉೆಯ ಮಲ್ಲಿಗೆ ಕೇಂದ್ರವಾದ ಶಿರ್ವದಿಂದ 2 ಕಿ.ಮೀ ದೂರದಲ್ಲಿ (ಶಿರ್ವ  ಕಾಪು ರಸ್ತೆ ಪಕ್ಕದಲ್ಲಿ) ಇರುವ ಇಕೋ ಗ್ರೋ ಫಾರ್ಮಿಗೆ ಸಾವಯವ ಕೃಷಿಕ ಗ್ರಾಹಕ ಬಳಗದ ನಮ್ಮ ತಂಡದ ಭೇಟಿ ನಿಗದಿಯಾಗಿತ್ತು. ಆಗ ಅಲ್ಲಿನ ಪಾಲಿಹೌಸ್‌ನೊಳಗೆ ಕಂಡದ್ದು ವಿವಿಧ ತರಕಾರಿ ಸಸಿಗಳು: ಬೆಂಡೆ, ಮೆಣಸು ಮತ್ತು ಸೊಪ್ಪುಗಳು  ಹರಿವೆ, ಸಬ್ಬಸಿಗೆ, ಮೆಂತೆ, ಪಾಲಕ್‌, ಕೊತ್ತಂಬರಿ; ಜೊತೆಗೆ ಮೀಟರ್‌-ಅಲಸಂದೆ ಬಳ್ಳಿಗಳು. ಇಷ್ಟು ದೊಡ್ಡ ಪಾಲಿಹೌಸ್‌ ನಿರ್ಮಾಣಕ್ಕೆ ಖರ್ಚು ಎಷ್ಟಾಯಿತು? ಎಂಬ ಪ್ರಶ್ನೆಗೆ ರಾಮಚಂದ್ರ ಪೈ ಅವರ ಉತ್ತರ: ಇಪ್ಪತ್ತು ಲಕ್ಷ ರೂಪಾಯಿ.

Advertisement

ಸುಪ್ರಸಿದ್ಧ ಸೋಲಾರ್‌ ಕಂಪೆನಿ ಸೆಲ್ಕೋದಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತರಾದಾಗ ಕೈಗೆ ಬಂದ ಮೊತ್ತವನ್ನೆಲ್ಲ ರಾಮಚಂದ್ರ ಪೈ ಅವರು ಪಾಲಿಹೌಸ್‌ನಲ್ಲಿ ಸಾವಯವ ಕೃಷಿಯ ಈ ಯೋಜನೆಯಲ್ಲಿ ತೊಡಗಿಸಿ¨ªಾರೆ. ಇದಕ್ಕೆ ಪ್ರೇರಣೆ ಏನೆಂದು ಕೇಳಿದಾಗ ಪೈ ಅವರು ಹೇಳಿದ್ದು– ಆರಂಭದಲ್ಲಿ ನನ್ನದೂ ರಾಸಾಯನಿಕ ಕೃಷಿ. ತರಕಾರಿ ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕಿದ್ದು; ರಾಸಾಯನಿಕ ಕೀಟನಾಶಕ ಪ್ರಯೋಗಿಸಿದ್ದು  ಇದೆಲ್ಲ ಐಐಎಚ್‌ ಆರ್‌ನ ತಜ್ಞರು ಹೇಳಿದ ಪ್ರಮಾಣದÇÉೇ. ಅಷ್ಟೆಲ್ಲ ಹಾಕಿದರೂ ತರಕಾರಿ ಗಿಡಗಳಿಗೆ ವಿಪರೀತ ರೋಗ ಮತ್ತು ಕೀಟಗಳ ಹಾವಳಿ. ಶುರುವಾಗಿ ನನಗೆ ಫ‌ಸಲೇ ಸಿಗಲಿಲ್ಲ. ಹಾಗಾದರೆ ಅದೆಲ್ಲ ವಿಷಗಳನ್ನು ಹಾಕಿ ಏನು ಪ್ರಯೋಜನ? ಅಂತ ಯೋಚನೆ ಮಾಡಿದೆ. ಇನ್ಮುಂದೆ  ಸಾವಯವ ಕೃಷಿಯನ್ನೇ ಮಾಡೋದು ಅಂತ ಆಗಲೇ ನಿರ್ಧರಿಸಿದೆ. ಅನಂತರ ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ತರಕಾರಿ ಬೆಳೀತಿದ್ದೇನೆ.

ರಾಮಚಂದ್ರ ಪೈ 2015ರಲ್ಲಿ ಪಾಲಿಹೌಸ್‌ ನಿರ್ಮಾಣ ಮಾಡಿ, ಅದರೊಳಗೆ ಮೊದಲು ಬೆಳೆಸಿದ್ದು ಕ್ಯಾಪ್ಸಿಕಂ. ಅದಕ್ಕೆ ಯಾವಾಗಲೂ ಬೇಡಿಕೆ ಇದೆ. ಅದನ್ನು ಬೆಳೆಸಿದರೆ ಭಾರೀ ಲಾಭವೂ ಇದೆ ಎಂದು ಬಹಳ ಜನ ರೈತರು ಹಾಗೂ ತಜ್ಞರು ಹೇಳಿದರು. ಅದನ್ನು ನಂಬಿ ಕ್ಯಾಪ್ಸಿಕಾಂ ಬೆಳೆಸಿ ಕೈಸುಟ್ಟುಕೊಂಡೆ ಎಂದು ತಮ್ಮ ಕಹಿ ಅನುಭವ ಬಿಚ್ಚಿಟ್ಟರು: ಬೀಜದಿಂದ ಶುರು ಮಾಡಿ, ಸಸಿಮಡಿ ತಯಾರಿ, ಸಸಿ ನಾಟಿ, ಗೊಬ್ಬರ ಹಾಕುವುದು  ಹೀಗೆ ಎಲ್ಲವನ್ನೂ ತಜ್ಞರು ಹೇಳಿದ ಹಾಗೆಯೇ ಮಾಡಿ¨ªೆ. ಆದರೆ, ಕ್ಯಾಪ್ಸಿಕಾಂ ಸಸಿಗಳು ವಿಲ್ಟ… (ಸೊರಗು) ರೋಗಕ್ಕೆ ಬಲಿಯಾದವು. ಇವತ್ತು ಸಂಜೆ ಚೆನ್ನಾಗಿದ್ದ ಸಸಿಗಳು, ಮರುದಿನ ಬೆಳಗ್ಗೆ ನೋಡಿದಾಗ ವಿಲ್ಟ… ರೋಗದಿಂದಾಗಿ ಸತ್ತು ಬಿದ್ದಿರುತ್ತಿದ್ದವು. ಆ ಬೆಳೆಗೆ ಹಾಕಿದ ಹಣವೂ ಸಿಗಲಿಲ್ಲ; ನನಗೆ ಪೂರಾ ನಷ್ಟವಾಯಿತು.

ಬೀಜ ಮತ್ತು ಸಸಿ ಆಯ್ಕೆ ಮಾಡುವಾಗ ಬಹಳ ಎಚ್ಚರ ವಹಿಸಬೇಕು; ಇಲ್ಲದಿದ್ದರೆ ಸೋಲುತ್ತೇವೆ ಎನ್ನುವುದಕ್ಕೆ ಅವರಿತ್ತ ಉದಾಹರಣೆ ಮೆಣಸು. ಇಲ್ಲಿವೆ ನೋಡಿ, ಹಾರ್ಟಿಕಲ್ಚರ್‌ ಡಿಪಾಟೆ¾ìಂಟಿನವರಿಂದ ಸಸಿಗೆ ಒಂದು ರೂಪಾಯಿ ರೇಟಿನಲ್ಲಿ ಖರೀದಿಸಿದ ಮೆಣಸಿನ ಗಿಡಗಳು. 3-4 ಅಡಿ ಎತ್ತರಕ್ಕೆ ಚೆನ್ನಾಗಿ ಬೆಳೆದಿವೆ. ಆದರೆ ಎಲೆ-ಮುರುಟು ರೋಗ ಬಂದು ಎಲೆಗಳೆಲ್ಲ ಮುರುಟಿ ಹೋಗಿವೆ; ಹಾಗಾಗಿ ಫ‌ಸಲೂ ಇಲ್ಲ. ನಾನಿಲ್ಲಿ ಬೆಳೆಸಿದ ಬೇರೆ ತರಕಾರಿ ಸಸಿಗಳಿಗೂ ಅದೇ ರೋಗ ಬಂದು ನನಗೆ ಬಹಳ ನಷ್ಟವಾಗಿದೆ. ಆ ಡಿಪಾಟೆ¾ìಂಟಿನವರು ಇಂತಹ ಸಸಿಗಳನ್ನು ಮಾರುತ್ತಲೇ ಇರುತ್ತಾರೆ. ನಾವೇ ರೈತರು ಜಾಗೃತೆ ವಹಿಸಬೇಕು. ಈ ರೋಗನಿರೋಧಿ ಮೆಣಸಿನ ತಳಿಗಳು ಐಐಎಚ್‌ ಆರ್‌ನಲ್ಲಿ ಸಿಗುತ್ತವೆ. ನಾನು ಅಲ್ಲಿಂದಲೇ ಬೀಜ ಖರೀದಿಸಿ, ಮೆಣಸು ಬೆಳೆಸಿದ್ದರೆ ಈ ನಷ್ಟ ಆಗುತ್ತಾ ಇರಲಿಲ್ಲ. ನಾವು ರೈತರು ಕೈಸುಟ್ಟುಕೊಂಡ ಮೇಲೆಯೇ ಕಲಿಯೋದು ಅನ್ನಿಸ್ತಿದೆ. ತರಕಾರಿ ಬೆಳೆಗಳಿಗೆ ರೋಗ ಮತ್ತು ಕೀಟಗಳ ಬಾಧೆ ಜಾಸ್ತಿ. ನಿಯಂತ್ರಣ ಮಾಡುತ್ತಲೇ ಇರಬೇಕು ಎನ್ನುತ್ತಾರೆ ಪೈ. ಅದಕ್ಕಾಗಿ, ಪಾಲಿಹೌಸಿನೊಳಗೆ ಲೈಟ್‌ ಟ್ರಾಪ್‌ಗ್ಳನ್ನು ನೇತು ಹಾಕಿ¨ªಾರೆ.

 4 ನೀಲಿ ಮತ್ತು 4 ಹಳದಿ ಫ‌ಲಕಗಳನ್ನು (ತಲಾ ಒಂದಡಿ ಅಳತೆ). ಎರಡು ವಾರಕ್ಕೊಮ್ಮೆ ಆ ಫ‌ಲಕಗಳಿಗೆ ವ್ಯಾಸಲೀನ್‌ ಲೇಪಿಸಿದರಾಯಿತು; ಬೇರೆಬೇರೆ ಕೀಟಗಳು ಆ ಫ‌ಲಕಗಳ ಬಣ್ಣಕ್ಕೆ ಆಕರ್ಷಿತವಾಗಿ ಬಂದು, ವ್ಯಾಸಲೀನ್‌ನಲ್ಲಿ ಸಿಲುಕಿ ಸಾಯುತ್ತವೆ ಎಂದು ಮಾಹಿತಿ ನೀಡಿದರು. ತಾವೇ ತಯಾರಿಸಿದ (ತಲಾ ರೂ.500 ವೆಚ್ಚದಲ್ಲಿ) ಆರು ಲೈಟ…-ಟ್ರಾಪ್‌ಗ್ಳನ್ನೂ ಅಲ್ಲಿ ನೇತು ಹಾಕಿ¨ªಾರೆ  ಕೀಟ ನಿಯಂತ್ರಣಕ್ಕಾಗಿ.

Advertisement

ರಾಮಚಂದ್ರ ಪೈ ಅವರ ಮನೆಯ ಸುತ್ತಲಿನ ಮೂರು ಹಳೆಯ ಬಾವಿಗಳ ನೀರು ಪಾಲಿಹೌಸ್‌ ತರಕಾರಿ ಕೃಷಿಗೆ ಸಾಕಾಗುತ್ತಿಲ್ಲ. ಮೊದಲ ವರ್ಷ ಟ್ಯಾಂಕರಿನಲ್ಲಿ ನೀರು ತರಿಸಿ, ತಲಾ 5,000 ಲೀಟರಿನ ಎರಡು ದೊಡ್ಡ ಪಿವಿಸಿ ಟ್ಯಾಂಕುಗಳಲ್ಲಿ ತುಂಬಿ, ಸಸಿಗಳಿಗೆ ನೀರೆರೆದಿದ್ದರು. 450 ಅಡಿ ಆಳದವರೆಗೆ ಎರಡು ಬೋರ್ವೆಲ್‌ಗ‌ಳನ್ನು ಕೊರೆಸಿದ್ದರು: ಆದರೆ ನೀರು ಸಿಗಲಿಲ್ಲ.  ಕಳೆದ ವರ್ಷ, ಪಾಲಿಹೌಸ್‌ ಪಕ್ಕದÇÉೇ 12 ಅಡಿ ಆಳದ, 15 ಲಕ್ಷ$ ಲೀಟರ್‌ ನೀರು ತುಂಬಿಡಬಲ್ಲ ಕೆರೆ ನಿರ್ಮಿಸಿ¨ªಾರೆ. ಅದರ ತಳಕ್ಕೆ ಪ್ಲಾಸ್ಟಿಕ್‌ ಹಾಳೆ; ಆ ಹಾಳೆ ತೂತಾಗದಂತೆ, ಅದರ ಕೆಳಗೆ ಬೇರೆ ಪ್ಲಾಸ್ಟಿಕ್‌ ಹಾಳೆ ಹಾಸಲಾಗಿದೆ. ಪಾಲಿಹೌಸಿನ ಮೇಲೆ ಬೀಳುವ ಮಳೆನೀರು ಆ ಕೆರೆಗೆ ಹೋಗುವ ವ್ಯವಸ್ಥೆಯಿದೆ. ಜೊತೆಗೆ, ಕೆರೆಯಲ್ಲಿ ತುಂಬಿದ ನೀರು ಆವಿಯಾಗೋದನ್ನು ನಿಯಂತ್ರಿಸಲು ಅಗ್ರೋನೆಟ್‌ ಚಾವಣಿ ಜೋಡಣೆ. ಇವೆಲ್ಲದಕ್ಕೆ ಅವರಿಗಾದ ಒಟ್ಟು ವೆಚ್ಚ ರೂ.2.25 ಲಕ್ಷ$. ರಾಮಚಂದ್ರ ಪೈಯವರು ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕಿ ಆಗಿದ್ದ ಅವರ ಪತ್ನಿ ಅನಿತಾ ಪಿಎಚಿx ಪದವೀಧರೆ. ಈಗ ಪಾಲಿಹೌಸ್‌ ಕೃಷಿಯಲ್ಲಿ ಪತಿಗೆ ಅವರ ಪೂರ್ಣ ಸಹಕಾರ.

ಮಾರ್ಗದರ್ಶನ ಮಾಡೋರಿಲ್ಲ…
ತಮ್ಮ ಪಾಲಿಹೌಸಿನ ವಿನ್ಯಾಸ ಈ ಪ್ರದೇಶದ ಹವಾಮಾನಕ್ಕೆ ಸೂಕ್ತವಲ್ಲ ಎನ್ನುತ್ತಾರೆ ಪೈ. ಯಾಕೆಂದರೆ, ಅದರೊಳಗೆ ಯಾವಾಗಲೂ ಉಷ್ಣತೆ 30 ಡಿಗ್ರಿ ಸೆ.ಗಿಂತ ಜಾಸ್ತಿ ಮತ್ತು ಆದ್ರìತೆ ಶೇ.90ಕ್ಕಿಂತ ಜಾಸ್ತಿ. ಈ ವಿಪರೀತ ಪರಿಸ್ಥಿತಿ ಫ‌ಂಗಸ… ಬೆಳವಣಿಗೆಗೆ ಹೇಳಿ ಮಾಡಿಸಿದಂತಿದೆ.  ಇದುವೇ ಪಾಲಿಹೌಸಿನೊಳಗೆ ಬೆಳೆದ ತರಕಾರಿ ಸಸಿಗಳಿಗೆ ಫ‌ಂಗಸ್‌ ರೋಗ ಬರಲು ಕಾರಣ ಎಂಬುದು ಅವರ ಖಚಿತ ಅಭಿಪ್ರಾಯ. ಇದು ಕೃಷಿಜ್ಞಾನಿಗಳಿಗೆ ಮತ್ತು ತಜ್ಞರಿಗೆ ಗೊತ್ತಿಲ್ಲವೇ? ಈ ವಿಷಯದಲ್ಲಿ ಪಾಲಿಹೌಸ… ನಿರ್ಮಿಸುವ ಕೃಷಿಕರಿಗೆ ಅವರು ಸೂಕ್ತ ಮಾರ್ಗದರ್ಶನ ಯಾಕೆ ಕೊಡುವುದಿಲ್ಲ? ಎಂದು ಪ್ರಶ್ನಿಸುವ ರಾಮಚಂದ್ರ ಪೈ, ಆ ಪ್ರಶ್ನೆಗೆ ತಾವೇ ಉತ್ತರ ನೀಡುತ್ತಾರೆ: ಯಾಕೆಂದರೆ, ಇದೆಲ್ಲ ಒಂದು ವಿಷವರ್ತುಲ. ಡಿಪಾಟೆ¾ìಂಟಿನವರು ವರುಷಕ್ಕೆ ಇಂತಿಷ್ಟು ಪ್ರಾಜೆಕ್ಟ… ಮಾಡಿಸಬೇಕೆಂದು ಗುರಿ ಹಾಕಿ ಕೊಂಡಿರುತ್ತಾರೆ. ಅವರಿಗೆ ಗುರಿ ಸಾಧನೆ ಮಾಡಿದರಾಯಿತು; ಅದರಿಂದಾಗಿ ಕೃಷಿಕರಿಗೆ ಭಾರೀ ನಷ್ಟವಾದರೂ ಅವರಿಗೇನೂ ತೊಂದರೆ ಆಗೋದಿಲ್ಲ. ಎರಡನೆಯದಾಗಿ, ಇದೇ ಏಜೆನ್ಸಿಯಿಂದ ಪ್ಲಾಸ್ಟಿಕ… ಹಾಳೆ ಇತ್ಯಾದಿ ವಸ್ತುಗಳನ್ನು ಖರೀದಿಸಬೇಕು ಮತ್ತು ಪಾಲಿಹೌಸ… ನಿರ್ಮಾಣ ಮಾಡಿಸಬೇಕು ಎಂದು ಷರತ್ತು ಹಾಕುತ್ತಾರೆ. ಇದರಿಂದ ಒಟ್ಟಾರೆ ನಷ್ಟ ಆಗೋದು ಕೃಷಿಕರಿಗೆ. ಸಬ್ಸಿಡಿ ತಗೊಳ್ಳದೆ, ಇದೇ ಪಾಲಿಹೌಸನ್ನು 12 ಲಕ್ಷ ರೂಪಾಯಿ ಖರ್ಚಿನಲ್ಲಿ ಮಾಡಬಹುದಾಗಿತ್ತು. ಹಾಗಿರುವಾಗ, ಇದಕ್ಕೆ 8 ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಮಾಡಿಸಿದ್ದು ಡಿಪಾಟೆ¾ìಂಟಿನಲ್ಲಿ ಬೇರುಬಿಟ್ಟಿರುವ ಭ್ರಷ್ಟತೆಗೆ ಪುರಾವೆ ಎಂದೂ ಅವರು ವಿಷಾದದಿಂದ ಹೇಳುತ್ತಾರೆ.

– ಅಡ್ಕೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next