Advertisement

ವಿಶ್ವ ಪ್ರಸಿದ್ಧ Playboy ಸ್ಥಾಪಕ, 91ರ ರಸಿಕ ಹೆಫ್ನರ್‌ ವಿಧಿವಶ

11:50 AM Sep 28, 2017 | udayavani editorial |

ವಾಷಿಂಗ್ಟನ್‌ : 1960ರಲ್ಲಿ ಪುರುಷರ “ಪ್ಲೇ ಬಾಯ್‌’ ನಿಯತಕಾಲಿಕವನ್ನು ಆರಂಭಿಸಿ ಜಾಗತಿಕ ಲೈಂಗಿಕ ಕ್ರಾಂತಿಯನ್ನೇ ಹುಟ್ಟುಹಾಕಿ ಅದರ ನೆಲೆಯಲ್ಲಿ ವಿಶಿಷ್ಟ ಔದ್ಯಮಿಕ ಸಾಮಾಜ್ಯವನ್ನೇ ಕಟ್ಟಿದ್ದ ಪ್ಲೇ ಬಾಯ್‌ ಸ್ಥಾಪಕ ಹಫ್ ಹೆಫ್ನರ್‌ 91ರ ಹರೆಯದಲ್ಲಿ ನಿನ್ನೆ ಬುಧವಾರ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು ಎಂದು ಪ್ಲೇ ಬಾಯ್‌ ಎಂಟರ್‌ಪ್ರೈಸಸ್‌ ತಿಳಿಸಿದೆ.

Advertisement

ಟೈಮ್‌ ಮ್ಯಾಗಝೀನ್‌ ಹಿಂದೊಮ್ಮೆ ಹೆಫ್ನರ್‌ ಅವರನ್ನು “ಪಾಪ್‌ ಹೆಡಾನಿಸಂ ಪ್ರವಾದಿ’ ಎಂದೇ ಕರೆದಿತ್ತು. 

ಹೆಫ್ನರ್‌ ತಮ್ಮ ಪ್ಲೇ ಬಾಯ್‌ ಮ್ಯಾಗಝೀನ್‌ ನ ಹಾಗೆ ಖುದ್ದು ಮಹಾ ರಸಿಕನೇ ಆಗಿದ್ದರು. ಅವರನ್ನು ಅತಿ ಲೈಂಗಿಕಾಸಕ್ತಿಯ ಪೀಟರ್‌ ಪ್ಯಾನ್‌ ವ್ಯಕ್ತಿತ್ವದವರೆಂದು ವರ್ಣಿಸಲಾಗುತ್ತಿತ್ತು. ಬಹುತೇಕ ದಂತಕತೆಯೇ ಆಗಿದ್ದ  ತಮ್ಮ ಪ್ಲೇ ಬಾಯ್‌ ಸೌಧದಲ್ಲಿ ಹೆಫ್ನರ್‌ ಕನಿಷ್ಠ ಏಳು ಮಂದಿ  ಕೆಂಚು ಕೂದಲಿನ, ಸಣ್ಣ ವಯಸ್ಸಿನ, ಲಲನೆಯನ್ನು ಇರಿಸಿಕೊಂಡಿದ್ದರು. 

ಹೆಫ್ನರ್‌ ಅವರ ಲೈಂಗಿಕಾವತಾರಗಳನ್ನು 2005ರಿಂದ 2010ರ ತನಕವೂ ಸರಣಿಯಾಗಿ ಪ್ರಸಾರವಾಗಿದ್ದ “ದಿ ಗರ್ಲ್ಸ್‌ ನೆಕ್ಟ್ ಡೋರ್‌’ ಎಂಬ ಟಿವಿ ರಿಯಾಲಿಟಿ ಶೋನಲ್ಲಿ ಅನಾವರಣಗೊಳಿಸಲಾಗಿತ್ತು. 

ತಮ್ಮ 80ರ ಹರೆಯದ ದಶಕದ ಉದ್ದಕ್ಕೂ ಲೈಂಗಿಕಾಸಕ್ತಿಯನ್ನು ಜೀವಂತ ಇರಿಸಿಕೊಂಡಿದ್ದ ಹೆಫ್ನರ್‌, ವಯಾಗ್ರಾ ಲೈಂಗಿಕ ಉತ್ಕರ್ಷೆಯ ಔಷಧಕ್ಕೆ ಧನ್ಯವಾದ ಸಮರ್ಪಿಸಿದ್ದರು !

Advertisement

2012ರಲ್ಲಿ ಹೆಫ್ನರ್‌ ಅವರು ತಮ್ಮ 86ನೇ ವಯಸ್ಸಿನಲ್ಲಿ ಕ್ರಿಸ್ಟಲ್‌ ಹ್ಯಾರಿಸ್‌ ತಮ್ಮ 60ರ ಹರೆಯದ ಚೆಲುವೆಯನ್ನು ತಮ್ಮ ಮೂರನೇ ಪತ್ನಿಯಾಗಿ ವರಿಸಿ ತಮ್ಮ “ವೈವಾಹಿಕ ಬದುಕಿನಲ್ಲಿ’ ಒಂದು ನೆಲೆಕಂಡಿದ್ದರು. 

1985ರಲ್ಲಿ ಒಮ್ಮೆ ಲಘು ಮೆದುಳಿನಾಘಾತಕ್ಕೆ (ಬ್ರೈನ್‌ ಸ್ಟ್ರೋಕ್‌ ಅಥವಾ ಲಕ್ವಕ್ಕೆ) ಗುರಿಯಾಗಿದ್ದ ವೇಳೆ ಹೆಫ್ನರ್‌ ತಮ್ಮ ಮಗಳು ಕ್ರಿಸ್ಟಿ ಯನ್ನು ಪ್ಲೇ ಬಾಯ್‌ ಎಂಟರ್‌ಪ್ರಸಸ್‌ ಸಂಸ್ಥೆಯ ಸಿಇಓ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next