Advertisement

ಮನೆಯಂಗಳದಲ್ಲಿ ಶುದ್ಧ ಗಾಳಿ ನೀಡುವ ಗಿಡಗಳು

10:59 PM Feb 07, 2020 | mahesh |

ವರ್ಷಗಳು ಕಳೆದಂತೆ ನಮ್ಮ ಸುತ್ತಮುತ್ತಲೂ ಮರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮರಗಳು ಕಡಿಮೆಯಾದಂತೆ ಶುದ್ಧ ಗಾಳಿ ಪ್ರಮಾಣವೂ ಕಡಿಮೆಯಾಗುತ್ತಿದೆ. ಮನೆ ಹೊರಗೆ, ಒಳಗೆ ಶುದ್ಧ ಗಾಳಿ ಸಿಗುತ್ತಿಲ್ಲ. ಆದರೆ ಮನೆ ಒಳಗಡೆ ಕೆಲವೊಂದು ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿಯನ್ನು ಪಡೆಯಬಹುದು.

Advertisement

ಲೋಳೆಸರ
ಲೋಳೆಸರವನ್ನು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸುತ್ತಾರೆ. ಈ ಗಿಡ ಇಂಗಾಲದ ಡೈ ಆಕ್ಸೆ„ಡ್‌, ಇಂಗಾಲದ ಮಾನಾಕ್ಸೆ„ಡ್‌, ಫಾರ್ಮುಲಾಡಿ ಹೈಡ್‌ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ಧಗಾಳಿ ದೊರೆಯುತ್ತದೆ. ಕಡಿಮೆ ಖರ್ಚಿನಲ್ಲಿ ಇದನ್ನು ಬೆಳೆಸಬಹುದು. ಮನೆಯ ಅಂದವನ್ನು ಹೆಚ್ಚಿಸುತ್ತದೆ.

ಸ್ಪೈಡರ್‌ ಪ್ಲಾಂಟ್‌
ಆಲಂಕಾರಿಕ ಗಿಡವಾಗಿರುವ ಸ್ಪೈಡರ್‌ ಪ್ಲಾಂಟ್‌ ಮನೆ ಅಂದವನ್ನು ಹೆಚ್ಚಿಸುವುದರೊಂದಿಗೆ ಮನೆ ತುಂಬಾ ಶುದ್ಧ ಗಾಳಿಯನ್ನು ನೀಡುತ್ತದೆ. ಈ ಗಿಡವನ್ನು ಮನೆಯ ಒಳಗಡೆ ಇಟ್ಟರೆ ಸಾಕು ಕಡಿಮೆ ಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುವುದರಿಂದ ಶುದ್ಧಗಾಳಿ ನೀಡುತ್ತದೆ.

ಶತಾವರಿ
ಆಯುರ್ವೇದಿಕ್‌ ಗಿಡವಾಗಿರುವ ಶತಾವರಿ ಶುದ್ಧ ಗಾಳಿಯನ್ನು ನೀಡುವ ಗಿಡಗಳಲ್ಲಿ ಒಂದಾಗಿದೆ. ಇದು ಗಾಳಿಯಲ್ಲಿ ರುವ ಬ್ಯಾಕ್ಟಿರಿಯಾ, ಸೋಂಕಾಣುಗಳನ್ನು ನಾಶಮಾಡುತ್ತದೆ.

ಡ್ರ್ಯಾಗನ್‌ ಗಿಡ
ಸಣ್ಣ ಜಾಗದಲ್ಲೂ ಇಡಬಹುದಾದ ಗಿಡ ಇದಾಗಿದೆ. ವಾಸ್ತು ಗಿಡ ಎಂದು ಕೂಡ ಇದನ್ನು ಕರೆಯುತ್ತಾರೆ. ಒಮ್ಮೆ ನೆಟ್ಟರೆ ಸಾಕು ವಿಶೇಷ ಆರೈಕೆ ಇದಕ್ಕೆ ಬೇಕಾಗಿಲ್ಲ.ಕಲುಷಿತ ಗಾಳಿಯಿಂದ ರಕ್ಷಣೆ ನೀಡುತ್ತದೆ.

Advertisement

ಸೇವಂತಿ ಹೂ
ಸೇವಂತಿ ಗಿಡ, ಹೂಗಳು ಶುದ್ಧ ಗಾಳಿಯನ್ನು ನೀಡುತ್ತವೆ. ಮನೆಯ ಗಾರ್ಡನ್‌ನಲ್ಲಿ ಇದನ್ನು ಬೆಳೆಸಬಹುದು.

ತುಳಸಿ
ಸನಾತನ ಸಂಸ್ಕೃತಿಯಲ್ಲಿ ಮಹತ್ವ ಸ್ಥಾನ ಹೊಂದಿರುವ, ಅನೇಕ ಆರೋಗ್ಯಕಾರ ಅಂಶಗಳನ್ನು ಹೊಂದಿರುವ ತುಳಸಿಯೂ ಶುದ್ಧ ಗಾಳಿಯನ್ನು ನೀಡುತ್ತದೆ. ಇಂಗಾಲದ ಡಯಾಕ್ಸೆ„ಡ್‌, ಕಾರ್ಬನ್‌ ಮಾನಾಕ್ಸೆ„ಡ್‌ಗಳನ್ನು ಹೀರಿಕೊಂಡು ಆಮ್ಲಜನಕವನ್ನು ಹೊರ ಸೂಸುತ್ತದೆ.

ಧನ್ಯಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next