Advertisement

ನಿಧನರಾದ ನೌಕರರ ಹೆಸರಲ್ಲಿ ಸಸಿ ನೆಡುವ ಕಾರ್ಯ

05:29 PM May 23, 2021 | Team Udayavani |

ದೇವನಹಳ್ಳಿ: ಕರ್ತವ್ಯ ನಿರ್ವಹಿಸುವಾಗಕೊರೊನಾ ಸೋಂಕು ತಗುಲಿ ನಿಧನರಾದಸರ್ಕಾರಿ ನೌಕರರುಗಳ ಸ್ಮರಣಾರ್ಥಕವಾಗಿತಾ. ಕಚೇರಿ ಮುಂಭಾಗದಲ್ಲಿ ಸುಮಾರು350 ಸಸಿಗಳನ್ನು ನೆಡುವ ಕಾರ್ಯಕ್ಕೆ ಎಸಿಪಿಶ್ರೀನಿವಾಸ್‌ ಮತ್ತು ತಹಶೀಲ್ದಾರ್‌ ಅನಿಲ್‌ಕುಮಾರ್‌ಅರೋಲಿಕರ್‌ಚಾಲನೆ ನೀಡಿದರು.

Advertisement

ತಹಶೀಲ್ದಾರ್‌ ಮಾತನಾಡಿ, ಸಸಿಗಳನ್ನುನೆಡುವುದು ಒಂದು ಧಾರ್ಮಿಕ ಕಾರ್ಯವಾಗಬೇಕು. ಅವುಗಳನ್ನು ಪೋಷಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.

ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಪ್ರಾಣಗಳನ್ನುಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಿಕೊಂಡು ತಮ್ಮಪ್ರಾಣವನ್ನೇ ಮುಡುಪಾಗಿಟ್ಟ ವಿವಿಧಇಲಾಖೆಯ ಸರಕಾರಿ ನೌಕರರ ಸ್ಮರಣಾರ್ಥಕವನ್ನು ಸ್ಮರಿಸುವ ಸಲುವಾಗಿ ಪರಿಸರಕ್ಕೆಕೊಡುಗೆಯಾಗಿ ಸಸಿ ನೆಡುವ ಕಾರ್ಯವನ್ನುಮಾಡಲಾಗಿದೆ ಎಂದರು.ಎಸಿಪಿ ಶ್ರೀನಿವಾಸ್‌ದೇವನಹಳ್ಳಿ ವಾರಿಯರ್ಗಳ ತಂಡ,ಕಂದಾಯ ಇಲಾಖೆ ಸಿಬ್ಬಂದಿ ಸಂತೋಷ್‌,ಪಿಎಸ್‌ಐ ನಾಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next