ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳುವಾರ್ಡ್ ದತ್ತು ಸ್ವೀಕರಿಸುವ ಮೂಲಕ ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ಮಾಡುವುದರೊಂದಿಗೆ ಕೃಷಿ ಜೀವನದ ಪರಿಚಯವನ್ನು ವಿದೇಶಿ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ.ಭೈರಪ್ಪ ಅಭಿಪ್ರಾಯಪಟ್ಟರು.
Advertisement
ಡಾ| ದಯಾನಂದ ಪೈ, ಪಿ.ಸತೀಶ್‌ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಸಂಸ್ಥೆ, ರಾಜ್ಯ ರೈತ ಸಂಘ ಹಸಿರು ಸೇನೆ, ಮಾಧ್ಯಮ ಕೇಂದ್ರ ತೊಕ್ಕೊಟ್ಟು, ಉಳ್ಳಾಲ, ಮಂಗಳೂರು ವಿಶ್ವವಿದ್ಯಾನಿಲಯದ ಅಂತರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ಮಂಗಳಗಂಗೋತ್ರಿ ಇದರ ಜಂಟಿ ಆಶ್ರಯದಲ್ಲಿ ಕೊಣಾಜೆ ಮೇಲ್ಮನೆ ಗಟ್ಟಿ ಮೂಲೆಯಲ್ಲಿವಿದ್ಯಾರ್ಥಿಗಳ ನಡಿಗೆ ರೈತರ ಹಡೀಲು ಭೂಮಿಯ ಕಡೆ ಅಂದೋಲನದ ಅಂತಿಮ ಸುತ್ತಿನ ಮುಂಗಾರಿನ ನಾಟಿ ಹಾಗೂ ಕೃಷಿ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದರು.
Related Articles
ಡಾ| ನವೀನ್ ಎನ್. ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು. ಯೋಜನಾಧಿಕಾರಿ ಪ್ರೊ| ಜೆಫ್ರಿ ರಾಡ್ರಿಗಸ್ ವಂದಿಸಿದರು. ಯೋಜನಾಧಿಕಾರಿ ಡಾ| ನಾಗವೇಣಿ ಮಂಚಿ ಕಾರ್ಯಕ್ರಮ ಸಂಯೋಜಿಸಿದರು.
Advertisement
ಕೃಷಿ ಸಂಸ್ಕೃತಿ ಪಠ್ಯದೊಂದಿಗೆ ಸೇರಲಿಕೊಣಾಜೆ ಗ್ರಾಮದ ಹಡೀಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಸುತ್ತಿರುವ ಡಾ| ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಕಾರ್ಯ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಅನುಕರಣೀಯ. ಈ ರೀತಿಯ ಕೃಷಿ ಚಟುವಟಿಕೆಗಳು ಶೈಕ್ಷಣಿಕ ಪಠ್ಯದ ಅವಿಭಾಜ್ಯ ಅಂಗವಾಗಿರಬೇಕು. ನಶಿಸುತ್ತಿರುವ ಕೃಷಿ ಸಂಸ್ಕೃತಿಯ ಮೂಲ ಪಾಠವನ್ನು ಶೈಕ್ಷಣಿಕ ಪಠ್ಯದೊಂದಿಗೆ ಹಾಗೂ ವಿಶ್ವ ವಿದ್ಯಾನಿಲಯಗಳ ಪಠ್ಯದೊಂದಿಗೆ ಸೇರ್ಪಡೆಗೊಳಿಸುವಂತೆ ಸರಕಾರದ ಗಮನ ಸೆಳೆಯುತ್ತೇನೆ.
ಯು.ಟಿ.ಖಾದರ್,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು