Advertisement

ಮಂಗಳೂರಿಗೆ ಬಂದ ಫ್ಲ್ಯಾನಿಂಗ್‌ ದೇವಾಚೆಂ

01:27 PM Dec 13, 2018 | |

ಕೊಂಕಣಿ ಭಾಷೆಯ ಬಿಗ್‌ ಬಜೆಟ್‌ ಸಿನೆಮಾ ‘ಪ್ಲ್ಯಾನಿಂಗ್‌ ದೇವಾಚೆಂ’ ಮಂಗಳೂರಿನ ಬಿಗ್‌ ಸಿನೆಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲು ರೆಡಿಯಾಗಿದೆ. ಗೋವಾ, ಹೊನ್ನಾವರ, ಕಾರವಾರ ವ್ಯಾಪ್ತಿಯಲ್ಲಿ ಈಗಾಗಲೇ ಪ್ರದರ್ಶನಗೊಂಡು ದಾಖಲೆ ಬರೆದ ಈ ಸಿನೆಮಾ ಬಹು ತಿಂಗಳ ಅನಂತರ ಮಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ‘ಟ್ರಿನಿಟಿ ಫಿಲ್ಮ್’ ಬ್ಯಾನರ್‌ನಡಿಯಲ್ಲಿ ಗೋವಾ ಮೂಲದ ಸೆವೆರಿನೊ ಫರ್ನಾಂಡೀಸ್‌ ನಿರ್ಮಾಣದ ರಾಜೇಶ್‌ ಫರ್ನಾಂಡೀಸ್‌ ನಿರ್ದೇಶನದ ‘ಪ್ಲ್ಯಾನಿಂಗ್‌ ದೇವಾಚೆಂ’ ಸಿನೆಮಾ ಕೊಂಕಣಿ ಭಾಷೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Advertisement

ಕೊಂಕಣಿ ಹಾಗೂ ಮರಾಠಿ ಚಿತ್ರನಟ ತಪನ್‌ ಆಚಾರ್ಯ ಚಿತ್ರದ ನಾಯಕರಾಗಿದ್ದಾರೆ. ಸಿಸಿಲ್‌ ಹಾಗೂ ಸೀಮಾ ಬುತೆಲ್ಲೋ ನಾಯಕಿಯರು. ಸಹಕಲಾವಿದರಾಗಿ ಎಡ್ಡಿ ಫರ್ನಾಂಡೀಸ್‌, ಸ್ಟಾನಿ ಅಲ್ವಾರಿಸ್‌, ಪ್ರನ್ಸ್‌ ಜಾಕೊಬ್‌, ಜಾನ್‌ ಡಿ’ಸಿಲ್ವ, ರೊನ್ಸ್‌ ಲಂಡನ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕವಿ ಮೆಲ್ವಿನ್‌ ರೊಡ್ರಿಗಸ್‌, ವಿಲ್ಸನ್‌ ಕಟೀಲ್‌, ಆರ್ಥರ್‌ ಪಿರೇರಾ ಸಾಹಿತ್ಯ ಬರೆದಿದ್ದಾರೆ. ಇದರ ಹಾಡುಗಳು ಈಗಾಗಲೇ ಕೊಂಕಣಿ ಸಿನೆಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next