Advertisement

ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ

09:02 AM Apr 27, 2019 | Hari Prasad |

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಬಿಹಾರದ ಪಾಟ್ನಾಗೆ ಸಾಗುತ್ತಿದ್ದ ಈ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣದಿಂದ ವಿಮಾನ ಮತ್ತೆ ನವದೆಹಲಿಗೆ ಮರಳಿದೆ.

Advertisement

ಈ ಘಟನೆಯಿಂದಾಗಿ ರಾಹುಲ್‌ ಗಾಂಧಿ ಅವರ ಶುಕ್ರವಾರದ ಚುನಾವಣಾ ಪ್ರಚಾರ ಸಭೆಗಳ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ. ರಾಹುಲ್‌ ಅವರು ಇಂದು ಬಿಹಾರದ ಸಮಷ್ಟಿಪುರ, ಒಡಿಸ್ಸಾದ ಬಾಲಾಸೋರ್‌ ಮತ್ತು ಮಹಾರಾಷ್ಟ್ರದ ಸಂಗಮ್ನೇರ್‌ ಗಳಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಬೇಕಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next