Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಜಿಲ್ಲೆಯ ಯಾವ ಹಳ್ಳಿಗಳಲ್ಲಿನೀರಿನ ಸಮಸ್ಯೆ ಇದೆ ಎಂದು ಗುರುತಿಸಿಸಮಸ್ಯೆಗಳಿಗೆ ಮುಂಚಿತವಾಗಿಯೇಪರಿಹಾರ ಕಂಡುಕೊಳ್ಳಬೇಕು ಎಂದರು.
Related Articles
Advertisement
ಜಾಗೃತಿ ಮೂಡಿಸಿ: ಜಿಲ್ಲೆಯ ನಗರ ಪ್ರದೇಶ, ಪುರಸಭೆ, ನಗರ ಸಭೆಗಳಂಥ ಪ್ರದೇಶಗಳಲ್ಲಿನೀರಿನ ಸಮಸ್ಯೆ ಕಡಿಮೆಯಿದೆ ಎಂದುಕಡೆಗಣಿಸುವಂತಿಲ್ಲ. ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಬಾರದಂತೆ ಹಾಗೂ ನೀರಿನಮಿತಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಜಿಪಂ ಉಪಕಾರ್ಯದರ್ಶಿ ಎನ್.ಡಿ.ಪ್ರಕಾಶ್, ಗ್ರಾಮೀಣ ಕುಡಿಯುವ ನೀರುಸರಬರಾಜು ಹಾಗೂ ನೈರ್ಮಲ್ಯ ವಿಭಾಗದಕಾರ್ಯಪಾಲಕ ಅಭಿಯಂತರ ಕುಮಾರ್,ಕೃಷಿ ಇಲಾಖೆಯ ಜಂಟಿ ನಿರ್ದೇಶಕಚಂದ್ರಶೇಖರ್, ಜಿಲ್ಲಾ ನಗರಾಭಿವೃದ್ಧಿಕೋಶದ ಆರ್.ಪ್ರತಾಪ್, ಜಿಲ್ಲಾಆರೋಗ್ಯಾ ಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ತಾಲೂಕು ಮಟ್ಟದ ಅಧಿ ಕಾರಿಗಳು ಸೇರಿದಂತೆ ಮತ್ತಿತರರಿದ್ದರು.
ಬೇಸಿಗೆ ಸಂಭವಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆಸಮಸ್ಯೆಯಾಗದಂತೆ ಮುಂಜಾಗ್ರತೆಕ್ರಮ ಕೈಗೊಳ್ಳಬೇಕು. ಸಮಸ್ಯೆಉಂಟಾಗುವ ಗ್ರಾಮಗಳಲ್ಲಿಟ್ಯಾಂಕರ್ ಅಥವಾ ಖಾಸಗಿಬೋರ್‌ವೆಲ್‌ಗಳಿಂದ ನೀರುಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. – ಎಸ್.ಅಶ್ವಥಿ, ಜಿಲ್ಲಾಧಿಕಾರಿ, ಮಂಡ್ಯ