Advertisement

ಐಟಿಐ ಕಾಲೇಜು ನಿರ್ಮಾಣಕ್ಕೆ ಶಂಕು ಸ್ಥಾಪನೆ

04:04 PM Nov 27, 2020 | Suhan S |

ಮಾಗಡಿ: ತಂತ್ರಜ್ಞಾನ ಯುಗದಲ್ಲಿ ತರಬೇತಿ ಸಂಸ್ಥೆಗಳು ಯುವಶಕ್ತಿಗೆ ತುಂಬ ಸಹಕಾರಿಯಾಗಿವೆ. ಯುವಕರು ತರಬೇತಿ ಸಂಸ್ಥೆಯಿಂದ ಉತ್ತಮ ತರಬೇತಿ ಪಡೆದುಕೊಂಡು ಉದ್ಯೋಗ ವಂತರಾಗಲು ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

Advertisement

ತಾಲೂಕಿನಮೇಲನಹಳ್ಳಿಯಲ್ಲಿ 4.15ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತಐಟಿಐಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,ಹೊರಗಡೆಯವರು ಉದ್ಯೋಗ ಪಡೆಯುವುದಲ್ಲ, ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ದೊರಕುವಂತೆ ಮಾಡುವ ಮೂಲಕ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಜಿಲ್ಲೆಯ ಬಿಡದಿಯಲ್ಲಿ ಇಂಡಸ್ಟ್ರಿಯಲ್‌ ಕೇಂದ್ರವಿದೆ. ಇದರ ಸುಧಾರಣೆಗೆಕ್ರಮಕೈಗೊಂಡಿದ್ದೇವೆ ಎಂದರು.

ಬಂದ್‌ ಇಲ್ಲ: ಡಿ.5ಕ್ಕೆಕರ್ನಾಟಕ್‌ ಬಂದ್‌ ಇಲ್ಲ, ಸರ್ಕಾರ ಬಂದ್‌ ಬೆಂಬಲಿಸಲ್ಲ. ಮರಾಠ ಜನರಿಗಾಗಿ ಮರಾಠ ಅಭಿವೃದ್ಧಿ ನಿಗಮ ಆಗಬೇಕೆಂಬ ಅವಶ್ಯಕತೆ ಇತ್ತು. ಇದನ್ನು ಸರ್ಕಾರ ಈಡೇರಿಸಿದೆ ಎಮದರು. ಇದೇ ವೇಳೆ ಡಿಸಿಎಂ ವೈ.ಜಿ.ಗುಡ್ಡ ಜಲಾಶಯ ವೀಕ್ಷಣೆ ಮಾಡಿದರು.

ಅಕ್ರಮ ಸಕ್ರಮ ಯೋಜನೆಯಡಿ ಜೇನುಕಲ್ಲು ಪಾಳ್ಯ ಮತ್ತು ಹೇಳಿಗೆಹಳ್ಳಿ ಕಾಲೋನಿ ನಿವಾಸಿ ಗಳಿಗೆ ಡಿಸಿಎಂ ಒಟ್ಟು 88 ಹಕ್ಕುಪತ್ರ ವಿತರಿಸಿದರು. ಹುಲೀಕಟ್ಟೆ ಗ್ರಾಮದಲ್ಲಿ 34 ಲಕ್ಷ ರೂ. ವೆಚ್ಚದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆಶಂಕುಸ್ಥಾಪನೆ, 2.50 ಕೋಟಿ ರೂ. ವೆಚ್ಚದಲ್ಲಿ ಸಂಕೀಘಟ್ಟ,ನಾರಾಯಣಪುರ,ಆಡಲಿಂಗನಹಳ್ಳಿ,ಮುಳುಕಟ್ಟಮ್ಮಗುಡಿಪಾಳ್ಯ, ಸಣ್ಣೇನಹಳ್ಳಿ ಹಾಗೂ ತಾವರೆಕೆರೆಗ್ರಾಮದರಸ್ತೆಅಭಿವೃದ್ಧಿಕಾಮಗಾರಿಗೆ ಚಾಲನೆ, ತಿಪ್ಪಸಂದ್ರದಲ್ಲಿ 2.28 ಕೋಟಿ ರೂ. ವೆಚ್ಚದಲ್ಲಿ ನೂತನ3ಆರೋಗ್ಯ ಸಮುದಾಯಕೇಂದ್ರ ಮತ್ತು1.80ಕೋಟಿ ವೆಚ್ಚದಲ್ಲಿ ಕುದೂರಿ ನಲ್ಲಿ ಮತ್ತು ಮರೂರು, ಸೋಲೂರಿನಲ್ಲಿ ಅಧಿಕಾರಿಗಳ ಸಭೆಕರೆದು ಡಿಸಿಎಂ ಚಿರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next