Advertisement
ನ.ಪಂ. ವತಿಯಿಂದ ಅಂಗವಿಕಲರಿಗೆ ಸೌಲಭ್ಯ ನೀಡುವ, ಮಾಹಿತಿ ಒದಗಿಸುವ ಜನಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಸುಳ್ಯದ ಪುರಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನ.ಪಂ. ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾಹಿತಿ ನೀಡಿ, ಸುಳ್ಯ ನಗರದಲ್ಲಿರುವ ಅಂಗವಿಕಲರ ನೋಂದಣಿ ಆಗಿದ್ದು, 118 ಮಂದಿ ಅರ್ಹ ಫಲಾನುಭವಿಗಳು ಹೆಸರನ್ನು ದಾಖಲಿಸಿಕೊಂಡಿದ್ದಾರೆ. ನಗರದಲ್ಲಿ ಇಷ್ಟೇ ಮಂದಿ ಅಂಗವಿಕಲರು ಇರುವುದಿಲ್ಲ. ಮಾಹಿತಿ ಸಿಗದೆ ಅವರು ಮುಂದೆ ಬಂದಿಲ್ಲ. ವಿದ್ಯಾರ್ಥಿ ವೇತನ, ಪ.ಜಾತಿ, ಪ.ಪಂ.ದವರಿಗೆ ಸಾಕಷ್ಟು ಸೌಲಭ್ಯಗಳಿವೆ. ಇದರ ಸದುಪಯೋಗ ಪಡೆದುಕೊಳ್ಳಿ. ಫಲಾನುಭವಿಗಳಲ್ಲಿ ಯಾರಾದರೂ ಮೃತರಾಗಿದ್ದರೆ ಅವರನ್ನುಪಟ್ಟಿಯಿಂದ ತೆಗೆಸುವಲ್ಲಿ ಅವರ ಮನೆಯವರು ಸಹಕರಿಸಬೇಕೆಂದರು.
Related Articles
Advertisement
ಅನುಪಾತ 3ರಿಂದ 5ಕ್ಕೆ ಏರಿಸಿಸದಸ್ಯ ಕೆ.ಎಂ. ಮುಸ್ತಾಫ ಮಾತನಾಡಿ, ಅಂಗವಿಕಲರಿಗೆ ಸೌಲಭ್ಯ ನೀಡುವ ಅನುಪಾತ ಶೇ. 3ರಿಂದ 5ಕ್ಕೆ ಹೆಚ್ಚಿಸಬೇಕು. ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ನೀಡುವ ಅನುದಾನ ಏನೇನೂ ಸಾಲದು. ಈ ಬಗ್ಗೆ ಸರಕಾರ ಗಮನ ಸೆಳೆಯುವಲ್ಲಿ ಪ್ರಯತ್ನಿಸುತ್ತೇವೆ ಎಂದರು. ಅಂಗವಿಕಲರು ಮಾನಸಿಕವಾಗಿ ಸಬಲರಾದರೆ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅನೇಕ ಅಂಗವಿಕಲರು ಮಾಡಿತೋರಿಸಿ ಮಾದರಿ ಆಗಿದ್ದಾರೆ ಎಂದರು. ಅಂಗವಿಕಲರು ಉದ್ಯೋಗಕ್ಕಾಗಿ ಮಂಗಳೂರಿನ ಉದ್ಯೋಗ ವಿನಿಮಯ ಕೇಂದ್ರ ದಲ್ಲಿ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು. ಸಹಾಯ ಹಸ್ತ ನೀಡಿ
ನ.ಪಂ. ಸದಸ್ಯ ಎನ್.ಎ. ರಾಮಚಂದ್ರ ಮಾತನಾಡಿ, ಅಂಗವಿಕಲರ ಮೇಲೆ ಅನುಕಂಪ ಬೇಡ. ಅವರಿಗೆ ಸಾಧ್ಯವಾದಷ್ಟು ಸಹಾಯ ಹಸ್ತ ನೀಡಿ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಕನ್ಯಾ ಮತ್ತು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಸುಬ್ರಹ್ಮಣಿ ಮತ್ತು ವಿ. ಪುಟ್ಟಣ್ಣ ಮಾಹಿತಿ ನೀಡಿದರು. ನ.ಪಂ. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಗೋಪಾಲ ನಡುಬೈಲು, ಪ್ರಕಾಶ್ ಹೆಗ್ಡೆ, ಜಾನಕಿ ನಾರಾಯಣ, ಮೀನಾಕ್ಷಿ ಡಿ., ಸುನೀತಾ ಡಿ’ಸೋಜಾ, ಗಿರೀಶ ಕಲ್ಲುಗದ್ದೆ, ಕಿರಣ್ ಕುರುಂಜಿ , ಶಿವಕುಮಾರ್, ಶ್ರೀಲತಾ ಪ್ರಸನ್ನ, ಬಿ. ಉಮ್ಮರ್, ಕೆ. ಗೋಕುಲದಾಸ್, ಯು. ಪ್ರೇಮಾ ಉಪಸ್ಥಿತರಿದ್ದರು. ಪ್ರವೀಣ್ ನಾಯಕ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ರವಿಕೃಷ್ಣ ನಿರೂಪಿಸಿದರು. ಜಯಲಕ್ಷಿ$¾à ಸಹಕರಿಸಿದರು. ಫಲಾನುಭವಿಗಳನ್ನು ಗುರುತಿಸಿ
ಈಗಾಗಲೇ ಅಂಗವಿಕಲರಿಗೆ ವಸತಿ ಸೌಲಭ್ಯ, ಉಚಿತ ನಳ್ಳಿ ನೀರು ಮೊದಲಾದವುಗಳನ್ನು ಪೂರೈಸಲಾಗಿದೆ. ಸೌಲಭ್ಯ ದಿಂದ ವಂಚಿತರಾದ ಫಲಾನುಭವಿಗಳ ಗುರುತಿಸುವ ಕೆಲಸ ಸಾರ್ವಜನಿಕರಿಂದ, ಅಧಿಕಾರಿ ಗಳಿಂದ ಆಗಬೇಕಾಗಿದೆ
-ಶೀಲಾವತಿ ಮಾಧವ, ನ.ಪಂ. ಅಧ್ಯಕ್ಷೆ