Advertisement

Nelson Mandela ಅವರಿಗೆ ಸೇರಿದ ಜಾಗಗಳು ಈಗ ವಿಶ್ವ ಪಾರಂಪರಿಕ ತಾಣಗಳು

12:31 AM Jul 28, 2024 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾನವ ಹಕ್ಕು ಹೋರಾಟಗಾರ ನೆಲ್ಸನ್‌ ಮಂಡೇಲಾ ಅವರಿಗೆ ಸೇರಿದ ಜಾಗಗಳಿಗೆ ವಿಶ್ವ ಪಾರಂಪರಿಕ ಸ್ಥಾನಗಳ ಗೌರವ ನೀಡಲಾಗಿದೆ. ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಇದು ಘೋಷಣೆ ಯಾದ ಕೂಡಲೇ ದಕ್ಷಿಣ ಆಫ್ರಿಕಾದ ಜನತೆ ಸಂಭ್ರಮಾ ಚರಣೆ ನಡೆಸಿದ್ದಾರೆ. ಮಂಡೇಲಾ ಅವರಿಗೆ ಸೇರಿದ ಸ್ಥಳಗಳನ್ನು ಪಾರಂಪರಿಕ ತಾಣ ಎಂದು ಘೋಷಿಸ ಲು ಇಟಲಿ, ದಕ್ಷಿಣ ಕೊರಿಯಾ, ಸೈಂಟ್‌ ವಿನ್ಸೆಂಟ್‌, ಗ್ರೆನೆಡಿಯಸ್‌ ದೇಶಗಳು ಬೆಂಬಲ ಸೂಚಿಸಿದವು. ಈ ನಿರ್ಧಾರಕ್ಕೆ ದ.ಆಫ್ರಿಕಾ ನಿಯೋಗದ ಮುಖ್ಯಸ್ಥೆ ಸಮಿತಿ ಸಭೆಗೆ ಧನ್ಯವಾದ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next