ಹೊಸದಿಲ್ಲಿ: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇ-ಕಾಮರ್ಸ್ ಜಾಲತಾಣಗಳು ಈ ನೆಲದ ಕಾನೂನನ್ನು ಗೌರವಿಸಲೇಬೇಕು. ಆದರೆ, ಅನೇಕ ವಾಣಿಜ್ಯ ವೆಬ್‌ಸೈಟ್‌ಗಳು ಕಾನೂನು ಪಾಲನೆ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಈ ತಪ್ಪನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯೆಲ್, ಗುಡುಗಿದ್ದಾರೆ.
ವೆಬಿನಾರ್ ಒಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೊಳಿಸಿರುವ ಇ-ಕಾಮರ್ಸ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿದ್ದಾರೆ.
“”ಭಾರತದ ಇ-ಕಾಮರ್ಸ್ ಕ್ಷೇತ್ರ ಒಂದು ಬೃಹತ್ ಮಾರುಕಟ್ಟೆ. ಇಲ್ಲಿ ಎಲ್ಲರಿಗೂ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶವಿದೆ. ಆದರೆ, ನಿಯಮಗಳ ಪಾಲಿಸುವುದು ಕಡ್ಡಾಯ. ಭಾರತೀಯ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಉದ್ಯೋಗ ನಷ್ಟದ ಭೀತಿ: ಈ ನಡುವೆ ಕೇಂದ್ರದ ಇ-ಕಾಮರ್ಸ್ ನಿಯಮಗ ಳಿಂದಾಗಿ, ಆ ಕ್ಷೇತ್ರದಲ್ಲಿ ಉದ್ಯೋಗ ನಷ್ಟ ಉಂಟಾಗುವ ಸಾಧ್ಯತೆ ಉಂಟಾಗಬಹುದು ಎಂದು ಬಿಜೆಪಿಯೇತರ ರಾಜ್ಯ ಸರಕಾರಗಳು ಆತಂಕ ವ್ಯಕ್ತಪ ಡಿಸಿವೆ. ಜೊತೆಗೆ, ಕೇಂದ್ರ ಸರಕಾರ ಜಾರಿಗೊಳಿಸಿರುವ 2020ರ “ಇ- ಕಾಮರ್ಸ್’ ಗ್ರಾಹಕರ ಸಂರ ಕ್ಷಣಾ ನಿಯಮಾವಳಿಗಳಿಗೆ ತಿದ್ದುಪಡಿ ತಂದು, ಇ-ಕಾಮರ್ಸ್ ವೆಬ್‌ಸೈಟ್‌ಗಳ ಲ್ಲಿನ ಉದ್ಯೋಗಿಗಳ ಹಾಗೂ ಆರ್ಥಿಕತೆಯ ಹಿತರಕ್ಷಣೆಗೆ ಪೂರಕವಾಗುವಂಥ ಅಂಶ ಸೇರಿಸಬೇಕು ಎಂದು ಆಗ್ರಹಿಸಿವೆ.