Advertisement
ರಸ್ತೆ ಅಭಿವೃದ್ಧಿಗೆ 2.58 ಕೋಟಿ ರೂ. ಬಿಡುಗಡೆ: ರಸ್ತೆ 12ರಿಂದ 15 ಅಡಿ ವಿಸ್ತೀರ್ಣ ಹೊಂದಿದ್ದು, ವಾಹನಗಳ ಸಂಚಾರಕ್ಕೆ ವಾಸದ ಮನೆಗಳೇ ಅಡ್ಡಿಯಾಗಿವೆ. ಇದನ್ನು ಮನಗಂಡ ಮಾಜಿ ಸಚಿವ ಎ.ಮಂಜು ರಸ್ತೆಯ ಅಭಿವೃದ್ಧಿಗೆ ಲೋಕಪಯೋಗಿ ಇಲಾಖೆಯಿಂದ 900 ಮೀಟರ್ ವಿಸ್ತೀರ್ಣದ ರಸ್ತೆಗೆ 2.58 ಕೋಟಿ ಬಿಡುಗಡೆ ಮಾಡಿಸಿದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ.
Related Articles
Advertisement
ರಸ್ತೆಯ ಅಭಿವೃದ್ಧಿಯ ವಿಷಯದಲ್ಲಿ ಶಾಸಕರು ಲೋಕಪಯೋಗಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಸ್ತೆಯ ಅಭಿವೃದ್ಧಿಗೆ ಕಾನೂನು ಪ್ರಕಾರ ಮುಂದಾಗುವಂತೆ ತಿಳಿಸುವ ಮೂಲಕ ನಿವಾಸಿಗಳಿಗೆ ತೊಂದರೆಯಾಗದಂತೆ ರಸ್ತೆಯ ವಿಸ್ತೀರ್ಣವನ್ನ 10.5 ಮೀ.ರಸ್ತೆಯನ್ನ ಅಗಲೀಕರಣ ಮಾಡುವಂತೆ ಈಗಾಗಲೇ ತಿಳಿಸಿದರೂ ಶಾಸಕರ ಮಾತಿಗೂ ಬೆಲೆ ಇಲ್ಲದಂತಾಗಿದೆ.
ರಸ್ತೆ ಅಭಿವೃದ್ಧಿಗೆ ಟೆಂಡರ್: ಸಾಲಗೇರಿ ರಸ್ತೆಯ ಅಭಿವೃದ್ಧಿ ಕುರಿತು ಮಾಹಿತಿ ನೀಡಿರುವ ಲೋಕಪಯೋಗಿ ಇಲಾಖೆ ಅಭಿಯಂತರ ರಾಜಶೇಖರ್, ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರನ್ನು ನಿಗದಿಗೊಳಿಸಲಾಗಿದೆ. ಈ ರಸ್ತೆಯ ಅಭಿವೃದ್ಧಿಗೆ 2.58 ಕೋಟಿ ಹಣ ಬಿಡುಗಡೆಯಾಗಿದೆ. ಅಲ್ಲಿಯ ನಿವಾಸಿಗಳು ಮನೆಗಳನ್ನು ತೆರವುಗೊಳಿಸದ ಕಾರಣ ರಸ್ತೆ ಅಭಿವೃದ್ಧಿ ಕಾರ್ಯವಿಳಂಬವಾಗುತ್ತಿದೆ. ಪಟ್ಟಣ ಪಂಚಾಯಿತಿಯವರು ಎಂದು ಒತ್ತುವರಿ ತೆರವುಗೊಳಿಸುವರೋ ಅಂದಿನಿಂದ 6 ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿದರು.
ಸಾಲಗೇರಿ ರಸ್ತೆ ಬದಿಯ ನಿವಾಸಿಗಳಿಗೆ ಮನೆ ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿದೆ. ಅಲ್ಲಿಯ ನಿವಾಸಿಗಳು ಮಳೆಗಾಲ ಇರುವ ಕಾರಣ ಮನೆಗಳನ್ನ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಮಳೆಗಾಲ ಕಳೆಯುವವರೆಗೆ ಕಾಲವಕಾಶ ಕೇಳಿದ್ದಾರೆ. ಮಳೆ ಕಡಿಮೆಯಾದ ನಂತರ ನಿವಾಸಿಗಳ ಮನೆ ತೆರವಿಗೆ ಮುಂದಾಗುತ್ತೇವೆ. -ಸುರೇಶ್‌ಬಾಬು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ