Advertisement
ಸದ್ಯದಲ್ಲೇ ದುರಾಡಳಿತಕ್ಕೆ ಜನತೆಯಿಂದ ತಕ್ಕ ಉತ್ತರ
Related Articles
Advertisement
ಈ ಸಂದರ್ಭದಲ್ಲಿ ಮುಖಂಡರಾದ ಮೆಲ್ಲಹಳ್ಳಿ ಪ್ರದೀಪ್, ಸಂತೋಷ್, ರವಿ, ಕೀರ್ತಿಕುಮಾರ್, ಕುಮಾರ್, ಮಹದೇವ್, ಶರತ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದು ನಾನಾ, ನೀವಾ ?
ಅಧಿಕಾರದ ದುರಾಸೆಯಿಂದ ಮಾಜಿ ಪ್ರಧಾನಿ ದೇವಗೌಡ ಬೆನ್ನಿಗೆ ಎರಡೆರಡು ಬಾರಿ ಚೂರಿ ಹಾಕಿದ್ದು ಯಾರು ಎಂಬುದನ್ನು ಮಾಜಿ ಶಾಸಕ ಕೆ.ವೆಂಕಟೇಶ್ ನೆನಪು ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ಆರೋಪಿಸಿದರು.
ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಳೆದ 2018 ರ ಚುನಾವಣೆಗೂ ಮುನ್ನ ದೇವೇಗೌಡರು ತಮ್ಮ ಹೊಸ್ತಿಲು ತುಳಿಯಲು ಬಿಡುವುದಿಲ್ಲ ಎಂಬುದನ್ನು ತಿಳಿದ ಮಾಜಿ ಶಾಸಕ ಕೆ.ವೆಂಕಟೇಶ್ ಸಾ.ರಾ.ಮಹೇಶ್ ರನ್ನು ದೇವೇಗೌಡರ ಮನೆಗೆ ಕಳುಹಿಸಿ ಮಹದೇವ್ 2 ಬಾರಿ ಸೋತಿದ್ದಾರೆ ಮುಂದಿನ ಈ ಬಾರಿಯೂ ಟಿಕೆಟ್ ಕೊಟ್ಟರೆ ಮತ್ತೆ ಸೋಲುತ್ತಾರೆ. ಹಾಗಾಗಿ ವೆಂಕಟೇಶ್ ರನ್ನು ಜೆಡಿಎಸ್ ಗೆ ಕರೆತಂದು ಟಿಕೆಟ್ ಕೊಡೋಣಾ ಎಂದು ಹೇಳಿ ಕಳುಹಿಸಿದ್ದರು ಆಗ ದೇವೇಗೌಡರು ಮಹದೇವ್ ಗೆ ಮೊದಲು ವಿಷಕೊಟ್ಟು ನಂತರ ವೆಂಕಟೇಶ್ ಪಕ್ಷ ಸೇರ್ಪಡೆ ಮಾಡಿಕೊ, ಸೋಲಲಿ, ಗೆಲ್ಲಲಿ ಮಹದೇವ್ ಗೆ ಟಿಕೆಟ್ ಕೊಡೋಣಾ ನಮ್ಮ ಬೆನ್ನಿಗೆ ಚೂರಿ ಹಾಕಿದ ವೆಂಕಟೇಶ್ ಯಾವುದೇ ಕಾರಣಕ್ಕೂ ನಮಗೆ ಬೇಡಾ ಎಂದು ಉಗಿದು ಕಳುಹಿಸಿದ್ದರು ಎಂದು ಆರೋಪಿಸಿದರು.
ನನ್ನ ರಾಜಕೀಯ ಜೀವನದಲ್ಲಿ ನೀಚ ಪ್ರವೃತ್ತಿ ಅಳವಡಿಸಿಕೊಂಡಿಲ್ಲ, ನಾನು ಶಾಸಕನಾಗಿ ಬಂದಾಗ ಕೋಟಿಗಟ್ಟಲೇ ಹಣ ತಂದು ನಿಮ್ಮ ಮುಂದೆ ಸುರಿಯುತ್ತೇವೆ, ಮಂತ್ರಿ ಮಾಡುತ್ತೇವೆ ಜೆಡಿಎಸ್ ಬಿಟ್ಟು ಬನ್ನಿ ಎಂದಾಗಲೇ ನಾನು ಹೋಗಲಿಲ್ಲ ಈಗ ಹೋಗುತ್ತೇವೆಯೇ, ವೆಂಕಟೇಶ್ ದೇವೇಗೌಡರ ಬೆಬ್ಬಿಗೆ ಹಾಕಿದ್ದ ಚೂರಿಯನ್ನು ಅವರ ಕುಟುಂಬ ಮರೆತಿಲ್ಲ, ಹೀಗಿರುವಾಗ ದೇವೇಗೌಡರ ಬೆನ್ನಿಗೆ ನಾನು ಚೂರಿ ಹಾಕುತ್ತೇನೆ ಎಂಬ ಅವರ ಬಾಲೀಷಾ ಹೇಳಿಕೆಗೆ ಸೊಪ್ಪು ಹಾಕುವ ಅಗತ್ಯವಿಲ್ಲ, ಇಂಥ ಸುಳ್ಳು ಹೇಳಿಕೆಗಳನ್ನು ನೀಡುವ ಪ್ರವೃತ್ತಿಯನ್ನು ಬಿಡಬೇಕು ಎಂದರು.
ಕಳೆದ ಮೂರು ದಿನಗಳ ಹಿಂದೆ ಮಾಜಿ ಶಾಸಕ ಕೆ.ವೆಂಕಟೇಶ್ ಕಾಂಗ್ರೆಸ್ ಸಮಾರಂಭ ಒಂದರಲ್ಲಿ ಮಾತನಾಡುತ್ತಾ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್ ಪಕ್ಷ ಹೆಸರು ಸೂಚಿಸಿದಾಗ ಇದೇ ಮಹದೇವ್ ದೇವೇಗೌಡರಿಗೆ ವಯಸ್ಸಾಗಿದ್ದು ಅರಿಗ್ಯಾಕೆ, ಕುಪೇಂದ್ರ ರೆಡ್ಡಿಗೆ ಕೊಟ್ಟಿದ್ದರೆ ಸ್ವಲ್ಪ ದುಡ್ಡಾದರೂ ಸಿಗುತ್ತಿತ್ತು ಎಂದು ಅಪಹಾಸ್ಯ ಮಾಡಿ ಈಗ ಓಟಿಗಾಗಿ ದೇವೇಗೌಡ-ಕುಮಾರಸ್ವಾಮಿಯ ಪೋಟೋ ಪ್ರದರ್ಶನ ಮಾಡುತ್ತಾ ಅಲೆದಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.