Advertisement

ಪಿರಾನ್ಹಾ ಮೀನು ದಾಳಿಗೆ ನಾಲ್ವರು ಸಾವು, ಹಲವು ಮಂದಿಗೆ ಗಾಯ

08:37 PM Jan 07, 2022 | Team Udayavani |

ವಾಷಿಂಗ್ಟನ್‌: ದಕ್ಷಿಣ ಅಮೆರಿಕದ ಪೆರಾಗ್ವೆಯಲ್ಲಿ ಪಿರಾನ್ಹಾ ಮೀನುಗಳ ದಾಳಿಯಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಾಳುಗಳಾಗಿದ್ದಾರೆ. ಅಮೆರಿಕದಲ್ಲಿ ಉಷ್ಣಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ನದಿಗಳತ್ತ ಪ್ರಯಾಣ ಆರಂಭಿಸಿ, ತಣ್ಣಗಿರುವ ಪ್ರಯತ್ನ ನಡೆಸಿದ್ದಾರೆ.

Advertisement

ಪರಾಗ್ವೆ ನದಿ ಬಳಿ ಹೆಚ್ಚಿನ ಜನರು ಸೇರುತ್ತಿದ್ದು, ಅಲ್ಲಿ ಪಿರಾನ್ಹಾ ಮೀನು ದಾಳಿ ಸಂಭವಿಸುತ್ತಿರುವುದಾಗಿ ವರದಿಯಾಗಿದೆ. ಜ.2ರಂದು ಪರಾಗ್ವೆ ನದಿಯಲ್ಲಿ ಆಟವಾಡುತ್ತಿದ್ದ 22 ವರ್ಷದ ಯುವಕ ನಾಪತ್ತೆಯಾಗಿದ್ದ. ಕೆಲ ಹೊತ್ತಿನ ನಂತರ ಆತನ ಮೃತ ದೇಹ ಪತ್ತೆಯಾಗಿದೆ. ಅದರಲ್ಲಿ ಪಿರಾನ್ಹಾ ಮೀನು ಆತನಿಗೆ ಗಂಭೀರವಾಗಿ ಗಾಯ ಮಾಡಿರುವುದು ಗೊತ್ತಾಗಿದೆ.

ಅದಾದ ನಂತರ ಅದೇ ನದಿಯಲ್ಲಿ 49 ವರ್ಷ ವ್ಯಕ್ತಿ ಕೂಡ ಇದೇ ರೀತಿ ಸಾವನ್ನಪ್ಪಿದ್ದಾನೆ. ಹಾಗೆಯೇ ಜ.2ರಂದು ಟೆಬಿಕ್ಯುರಿ ನದಿಯಲ್ಲಿ ಇಬ್ಬರು ಮೀನಿನ ದಾಳಿಯಿಂದಾಗಿ ಸಾವನ್ನಪ್ಪಿರುವುದು ವರದಿಯಾಗಿದೆ.

ಇದನ್ನೂ ಓದಿ : ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಬೆಡ್‌ ನಿರಾಕರಿಸುವಂತಿಲ್ಲ : ಉಡುಪಿ ಡಿಸಿ ಎಚ್ಚರಿಕೆ 

Advertisement

Udayavani is now on Telegram. Click here to join our channel and stay updated with the latest news.

Next