Advertisement

ಪಿಂಕಿ ಎಲ್ಲಿ? ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮನ್ನಣೆ

12:07 PM Feb 28, 2022 | Team Udayavani |

ಈಗಾಗಲೇ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿರುವ “ಪಿಂಕಿ ಎಲ್ಲಿ?’ ಚಿತ್ರ ಈ ಬಾರಿ ನಡೆಯಲಿರುವ “13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ’ದ ಮೂರು ವಿಭಾಗಗಳಲ್ಲಿ ಪ್ರದರ್ಶನವಾಗಲಿದೆ.

Advertisement

ಇದೇ ಮಾರ್ಚ್‌ 3 ರಿಂದ 10ರ ವರೆಗೆ”13ನೇ ಬೆಂಗಳೂರು ಅಂತರಾಷ್ಟ್ರೀಯಸಿನಿಮೋತ್ಸವ’ ನಡೆಯಲಿದ್ದು, ಈಸಿನಿಮೋತ್ಸವದಲ್ಲಿ ಏಷ್ಯನ್‌ ಸಿನಿಮಾವಿಭಾಗ, ಭಾರತೀಯ ಸಿನಿಮಾವಿಭಾಗ ಮತ್ತು ಪ್ರಾದೇಶಿಕ ಸಿನಿಮಾ ವಿಭಾಗ ಸೇರಿದಂತೆ ಮೂರೂವಿಭಾಗಗಳಲ್ಲೂ “ಪಿಂಕಿ ಎಲ್ಲಿ?’ಸಿನಿಮಾ ಪ್ರದರ್ಶನವಾಗುತ್ತಿದೆ. ಇದೇಮೊದಲ ಬಾರಿಗೆ ಕನ್ನಡ ಒಂದೇ ಸಿನಿಮಾ “ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ’ ದಲ್ಲಿ ಮೂರೂ ವಿಭಾಗಗಳಲ್ಲೂ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು”ಪಿಂಕಿ ಎಲ್ಲಿ?’ ಸಿನಿಮಾದ ಇನ್ನೊಂದು ಹೆಗ್ಗಳಿಗೆ.

ಕೃಷ್ಣೇಗೌಡ ನಿರ್ಮಾಣದಲ್ಲಿ ಮೂಡಿಬಂದಿರುವ “ಪಿಂಕಿ ಎಲ್ಲಿ?’ಚಿತ್ರಕ್ಕೆ ಪೃಥ್ವಿ ಕೋಣನೂರು ನಿರ್ದೇಶನವಿದೆ. ಅಕ್ಷತಾ ಪಾಂಡವಾಪುರ, ಗುಂಜಲಮ್ಮ, ದೀಪಕ್‌ ಸುಬ್ರ ಮಣ್ಯ, ಸಂಗಮ್ಮ, ಅನೂಪ್‌ ಶೂನ್ಯ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಹಾನಗರದಲ್ಲಿ ಕಳೆದು ಹೋಗುವ ಎಂಟು ತಿಂಗಳ ಹೆಣ್ಣು ಮಗುವಿನಹುಡುಕಾಟದ ಸುತ್ತ “ಪಿಂಕಿ ಎಲ್ಲಿ?’ ಚಿತ್ರದ ಕಥಾಹಂದರ ಸಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next