ಮಹದೇವಪುರ: ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕತ್ಸೆ ಪಡೆಯುವ ಕುರಿತು ಜನಸಮಾನ್ಯರಲ್ಲಿ ಜಾಗೃತಿ ಮೂಡಿಸಲು ಸಕ್ರ ವರ್ಲ್ಡ್ ಆಸ್ಪತ್ರೆ ಸಹಯೋಗದಲ್ಲಿ ರೋಟರಿ ಪಾಮ್‌ವಿಲ್ಲೆ, “ಪಿಂಕ್ ಎಕ್ಸ್‌ಪ್ರೆಸ್’ ವಾಹನ ಪರಿಚಯಿಸಿದೆ.
ಪಿಂಕ್ ಎಕ್ಸ್‌ಪ್ರೆಸ್ ವಾಹನವು ಸುಸಜ್ಜಿತ ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ಕೇಂದ್ರ, ಅಗತ್ಯ ಸಲಕರಣೆಗಳನ್ನು ಒಳಗೊಂಡಿದೆ. ಎಲ್ಲಿಗೆ ಬೇಕಾದರೂ ತೆರಳಿ ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು ಸರಳವಾಗಿ ಮಾಡಬಹುದು.
ಆರ್ಥಿಕವಾಗಿ ಹಿಂದುಳಿದವರಿಗಾಗಿ ಪಿಂಕ್ ಎಕ್ಸ್‌ಪ್ರೆಸ್ ಮೂಲಕ ಸ್ತನ ಕ್ಯಾನ್ಸರ್ ಉಚಿತ ಸ್ಕ್ರೀನಿಂಗ್ ಶಿಬಿರ ಹಮ್ಮಿಕೊಳ್ಳಲಿದ್ದು, ಅಗತ್ಯ ಔಷಧ, ವೈದ್ಯಕೀಯ ಸಲಕರಣೆಗಳನ್ನು ರೋಟರಿ ಬೆಂಗಳೂರು ಪೂರೈಸಲಿದೆ. ವೈದ್ಯರು ಹಾಗೂ ವೈದ್ಯಕೀಯ ತಂತ್ರಜ್ಞಾನವನ್ನು ಸಕ್ರ ವರ್ಲ್ಡ್ ಆಸ್ಪತ್ರೆ ಒದಗಿಸುತ್ತದೆ.
ಈ ವೇಳೆ ಮಾತನಾಡಿದ ರೋಟರಿ ಪಾಮ್‌ವಿಲ್ಲೆ ಅಧ್ಯಕ್ಷ ರಿತೇಶ್ ಗೋಯಲ್, ಪಿಂಕ್ ಎಕ್ಸ್‌ಪ್ರೆಸ್‌ನಲ್ಲಿ ಥರ್ಮಲ್ ಇಮೇಜಿಂಗ್ ಮೂಲಕ ಸ್ಕ್ರೀನಿಂಗ್ ನಡೆಸಲಿದ್ದು, ಇದು ಸ್ಪರ್ಶ ಮತ್ತು ನೋವು ರಹಿತ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಸಕ್ರ ವರ್ಲ್ಡ್ ಆಸ್ಪತ್ರೆಯ ಎ..ಡಿ ತಕಾಶಿ ಮಾಕಿ ಮಾತನಾಡಿ, ಭಾರತದಲ್ಲಿ ಇತ್ತೀಚೆಗೆ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಸಾವಿಗೀಡಾಗುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದಕ್ಕೆ ಈ ಕಾಯಿಲೆ ಬಗೆಗಿನ ಅರಿವಿನ ಕೊರತೆ ಕಾರಣವಾಗಿದೆ ಎಂದರು.
ರೋಟರಿ ಪಾಮ್‌ವಿಲ್ಲೆ ಕಾರ್ಯಕ್ರಮ ನಿರ್ದೇಶಕ ಸುಮಿತ್ರೋ ಘೋಷ್ ಮಾತನಾಡಿ, ಬೆಂಗಳೂರು ಸುತ್ತಲ ಗ್ರಾಮೀಣ ಭಾಗ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವೆಡೆ ಪಿಂಕ್ ಎಕ್ಸ್‌ಪ್ರೆಸ್ ಶಿಬಿರಗಳು ನಡೆಯಲಿವೆ ಎಂದರು.