Advertisement

ಪಿಂಪ್ರಿ ನೆಹರೂ ನಗರದ ಶ್ರೀ ಅಯ್ಯಪ್ಪ ಸೇವಾ ಮಂಡಲ ಮಹಾಪೂಜೆ

03:40 PM Jan 17, 2018 | |

ಪುಣೆ: ಪಿಂಪ್ರಿ- ಚಿಂಚ್ವಾಡ್‌  ಪರಿಸರದ  ನೆಹರು ನಗರದ ಅಯ್ಯಪ್ಪ ದೇವಸ್ಥಾನದಲ್ಲಿ 21 ನೆ ವರ್ಷದ  ವಾರ್ಷಿಕ ಮಹೋತ್ಸವ ಹಾಗು ವಾರ್ಷಿಕ ಮಹಾಪೂಜೆಯು ಮಕರ ಸಂಕ್ರಮಣದ ಶುಭ ದಿನವಾದ ಜ. 14 ರಂದು ಮುಂಜಾನೆಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಈ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಗುರು ಸ್ವಾಮಿಗಳಾದ ಆನಂದ ಸ್ವಾಮೀ ಅವರ ನೇತೃತ್ವದಲ್ಲಿ ದೇವಸ್ಥಾನದ ಆರಾಧ್ಯ ದೇವರಿಗೆ ವಿಶೇಷ ಪೂಜೆ ಅಲಂಕಾರ ಪೂಜೆ ಮತ್ತು ಇನ್ನಿತರೆ ದೇವತಾ ಪೂಜಾ ಕಾರ್ಯಕ್ರಮಗಳು ಜರಗಿದ ನಂತರ ಭಕ್ತರಿಂದ ಭಜನೆ,  ಶ್ರೀ  ಶಬರಿ ಮಲೆ  ಕ್ಷೇತ್ರಕ್ಕೆ ತೆರಳಲಿರುವ ಸುಮಾರು 21 ಅಯ್ಯಪ್ಪ ವ್ರತಾದಾರಿ ಸ್ವಾಮೀಜಿಗಳವರ ಇರುಮುಡಿ ತುಪ್ಪ ಕಾಯಿ ಸೇವೆ ಬಹಳ ಶ್ರ¨ªಾ ಭಕ್ತಿಯಿಂದ ಜರಗಿತು, ನಂತರ ಕಲಾ ಸೌರಭ ತಂಡದವರಿಂದ ಭಕ್ತಿ ರಸ ಮಂಜರಿ ಕಾರ್ಯಕ್ರಮ ನೆರವೇರಿತು.

ಅಪರಾಹ್ನ 12 ರಿಂದ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಮಹಾಪೂಜೆ ಮತ್ತು ಪಡಿಪೂಜೆ, ಮಹಾ ಮಂಗಳಾರತಿಯು  ಸಾವಿರಾರು ಸಂಖ್ಯೆಯಲ್ಲಿ  ಸೇರಿದ ಅಯ್ಯಪ್ಪ ಭಕ್ತ ಜನ ಸಮೂಹದ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ವೇದ ಘೋಷದೊಂದಿಗೆ,  ಚೆಂಡೆ ವಾದ್ಯ ಕೊಂಬು  ಘೋಷಗಳೊಂದಿಗೆ ನೆರವೇರಿತು. ನಂತರ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಿತು.

ಪುಣೆ ಮತ್ತು ಪಿಂಪ್ರಿ-ಚಿಂಚಾÌಡ್‌ ಪರಿಸರದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ರಾಜಕೀಯ ನಾಯಕರುಗಳು ಈ ಮಹಾಪೂಜೆಯಲ್ಲಿ ಪಾಲ್ಗೊಂಡರು.  ಅಲ್ಲದೆ   ಅಸಂಖ್ಯಾತ ತುಳು ಕನ್ನಡಿಗರಲ್ಲದೆ ಇತರೆ ಭಾಷಿಕರು ಈ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಪರಿಸರದ ಗಣ್ಯ ವ್ಯಕ್ತಿಗಳಿಗೆ ಮಂಡಲದ ಅಧ್ಯಕ್ಷ ಜಯಾನಂದ ಶೆಟ್ಟಿ ಮತ್ತು ಆನಂದ ಗುರುಸ್ವಾಮಿ ಹಾಗು ಅಯ್ಯಪ್ಪ ಮಾಲಾಧಾರಿಗಳು ಗಂಧ ಪ್ರಸಾದ ನೀಡಿ ಸತ್ಕರಿಸಿದರು. ನೆಹರುನಗರ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷರಾದ ಜಯಾನಂದ ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ವಾರ್ಷಿಕ ಮಹಾಪೂಜೆಯ ಅಂಗವಾಗಿ ಜ. 13 ಮತ್ತು 14 ರಂದು   ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Advertisement

ಜ. 13 ರಂದು ಜಯನಂದ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರವೀಣ್‌ ಶೆಟ್ಟಿ ಪುತ್ತೂರು ಅವರ ನೇತೃತ್ವದ  ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇದರ ನುರಿತ ಕಲಾವಿದರು ಹಾಗು ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ  ಶಬರಿ ಮಲೆ ಅಯ್ಯಪ್ಪ  ಎಂಬ ಯಕ್ಷಗಾನ ಬಯಲಾಟ  ಪ್ರದರ್ಶನಗೊಂಡಿತು.

ಪಿಂಪ್ರಿ-ಚಿಂಚಾÌಡ್‌ ನಗರದಲ್ಲಿಯೆ  ಪ್ರಥಮ ಬಾರಿಗೆ ಈ ಯಕ್ಷಗಾನ ಪ್ರಸಂಗವು ಪ್ರದರ್ಶನಗೊಂಡಿದ್ದರಿಂದ ಕಿಕ್ಕಿರಿದು ತುಂಬಿದ ಜನಸಾಗರದ ನಡುವೆ ಬಹಳ ಭಕ್ತಿ ಭಾವದಿಂದ ಈ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿ ಪುನೀತರಾದರು. ಈ ಸಂದರ್ಭದಲ್ಲಿ ಅಧ್ಯಕ್ಷ ಜಯಾನಂದ ಶೆಟ್ಟಿ ಅವರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಅವರನ್ನು ದೇವರ ಪ್ರಸಾದ, ಫಲಪುಷ್ಪ ನೀಡಿ ಸತ್ಕರಿಸಿದರು.

ನೆಹರು ನಗರದ ಅಯ್ಯಪ್ಪ ಮಂಡಳಿಯ ಅದ್ಯಕ್ಷ ಜಯನಂದ ಶೆಟ್ಟಿ, ಸೇವಾ ಮಂಡಳಿಯ ಪ್ರಧಾನ ಕಾರ್ಯದರ್ಶಿ  ಸುದರ್ಶನ್‌ ನಾಯಕ್‌, ಮಹಿಳಾ ವಿಭಾಗದ  ಕಾರ್ಯಾದ್ಯಕ್ಷೆ  ಭವಂತಿ ಪೂಜಾರಿ, ಕಾರ್ಯದರ್ಶಿ ಇಂದಿರಾ ಶೆಟ್ಟಿ ಹಾಗು ಸರ್ವ ಸದಸ್ಯರು ಕಾರ್ಯಕ್ರಮದ ಯಶ ಸ್ಸಿಗೆ ಸಹಕರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು  ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾದರು. 

ಚಿತ್ರ-ವರದಿ:ಹರೀಶ್‌ ಮೂಡಬಿದ್ರಿ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next