Advertisement

ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವ

04:48 PM Dec 29, 2017 | Team Udayavani |

ಪುಣೆ: ಬಂಟ ಸಮಾಜದ ಬಾಂಧವರು ತಮ್ಮ ಸಮಾಜದ ಮೇಲೆ ಅಭಿಮಾನ ಬೆಳೆಸಿ ಕೊಂಡು ಚಿಂಚ್ವಾಡ್‌ ಪರಿಸರದಲ್ಲಿರುವ ಎಲ್ಲಾ ಬಂಧುಗಳನ್ನು ಸಂಘಟನೆಯ ಮೂಲಕ ಒಗ್ಗೂಡಿಸಿಕೊಂಡು ಕ್ರೀಡೋತ್ಸವದಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಅಭಿಮಾನ ಪಡಬೇಕಾದ ವಿಷಯವಾಗಿದೆ.  ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆನಂದವಾಗುತ್ತಿದೆ.  ಕ್ರೀಡಾಭ್ಯಾಸದಿಂದ ನೈಸರ್ಗಿಕವಾಗಿ ದೇಹದಂಡನೆಯೊಂದಿಗೆ ಆರೋಗ್ಯವಂತರಾಗಿ ಬಾಳಬಹುದಾಗಿದೆ. ನಮ್ಮ ಹಿರಿಯರು ಪ್ರಾಕೃತಿಕ ಸೌಲಭ್ಯ ಬಳಸಿಕೊಂಡು ಉತ್ತಮ ಆಹಾರ ಪದ್ಧತಿ, ನಿಯಮಿತ ದೇಹದಂಡನೆಯೊಂದಿಗೆ ಜೀವನ ನಡೆಸಿಕೊಂಡು ಆರೋಗ್ಯವಂತರಾಗಿ ದೀರ್ಘ‌ಕಾಲ ಬಾಳಿದ್ದರು. ಆದರೆ ಆಧುನಿಕ ಕಾಲಘಟ್ಟದಲ್ಲಿ ನಾವು ಕೃತಕ ಸೌಲಭ್ಯಗಳ ದಾಸರಾಗಿ ಆಯುಷ್ಯವನ್ನು ಕುಂಠಿತಗೊಳಿಸುವ ಹಾದಿಯಲ್ಲಿದ್ದೇವೆ. ಆದುದರಿಂದ ನಮ್ಮ ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ವ್ಯಾಯಾಮ ದೊರಕುವಂತಹ ಕ್ರೀಡಾಭ್ಯಾಸದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪೋ›ತ್ಸಾಹಿಸಬೇಕಾಗಿದೆ ಎಂದು ಬೋಸ್ರಿ ಶಾಸಕ ಮಹೇಶ್‌ ದಾದಾ ಲಾಂಡೆY ನುಡಿದರು.

Advertisement

ಅವರು ಡಿ. 25 ರಂದು ನಿಗಿxಯ ಮದನ್‌ ಲಾಲ್‌ ಡಿಂಗ್ರಾ  ಕ್ರೀಡಾಂಗಣದಲ್ಲಿ ನಡೆದ ಪಿಂಪ್ರಿ ಚಿಂಚಾÌಡ್‌ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಬಲೂನು ಹಾರಿಸಿ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಳುಗಳಿಗೆ ಶುಭಹಾರೈಸಿದರು.

ಸಂಘದ ಅಧ್ಯಕ್ಷ ಕಟ್ಟಿಂಗೇರಿಮನೆ ಮಹೇಶ್‌ ಹೆಗ್ಡೆ ಮಾತನಾಡಿ, ಪ್ರತೀ ವರ್ಷದಂತೆ ಇಂದು ನಮ್ಮ ಸಂಘದ ಕ್ರೀಡೋತ್ಸವವನ್ನು ಸಮಾಜ ಬಾಂಧವರಿಗಾಗಿ ಆಯೋಜಿಸಿದ್ದು ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿ. ಈ ಕ್ರೀಡೋತ್ಸವವನ್ನು ಆಯೋಜಿಸಲು ಸಹಕಾರ ನೀಡಿದ ಸಂಘದ ಎಲ್ಲಾ ಪದಾಧಿಕಾರಿಗಳು, ಯುವ ವಿಭಾಗ, ಮಹಿಳಾ ವಿಭಾಗದ ಎಲ್ಲರನ್ನೂ ಅಭಿನಂದಿಸುತ್ತೇನೆ. ಮುಂದೆಯೂ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಮಾಜ ಬಾಂಧವರು ಭಾಗವಹಿಸಿ ಪ್ರೋತ್ಸಾಹ ನೀಡಬೇಕು ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಜಯ್‌ ಶೆಟ್ಟಿ ಬೋರ್ಕಟ್ಟೆ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಬಜಗೋಳಿ, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಕುರ್ಕಾಲ್‌, ಕ್ರೀಡಾ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಪೆಲತ್ತೂರು ಮೇಲ್ಮನೆ, ಶಿಕ್ಷಣ ಮತ್ತು ಸಮಾಜಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ವಿನಯ್‌ ಶೆಟ್ಟಿ ಕೆಂಜೂರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್‌ ಶೆಟ್ಟಿ ಪೆರ್ಡೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ತನುಜಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಜಿತ್‌ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.

ಬೆಳಗ್ಗೆ ಸಂಘದ ಪದಾಧಿಕಾರಿಗಳು ಮತ್ತು ಅತಿಥಿಗಳು ನಿಗಿx ಶ್ರೀ ಕೃಷ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮೆರವಣಿಗೆಯೊಂದಿಗೆ ಕ್ರೀಡಾಂಗಣಕ್ಕೆ ತಂದರು. ಆನಂತರ ಮುಖ್ಯ ಅತಿಥಿಗಳು ಬಲೂನು ಹಾರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಂಘದ ಉಪಾಧ್ಯಕ್ಷ ವಿಜಯ್‌ ಶೆಟ್ಟಿ ಸ್ವಾಗತಿಸಿದರು. ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್‌ ಶೆಟ್ಟಿ ವಂದಿಸಿದರು. ಅತಿಥಿಗಳನ್ನು ಶಾಲು ಹೊದೆಸಿ, ನೆನಪಿನ ಕಾಣಿಕೆ, ಪುಷ್ಪಗುಚವನ್ನಿತ್ತು ಪದಾಧಿಕಾರಿಗಳು ಗೌರವಿಸಿದರು. ಪೆಲತ್ತೂರು ಸುಧಾಕರ ಶೆಟ್ಟಿಯವರು ಕ್ರೀಡಾಕೂಟದ ಪ್ರಾಯೋಜಕರುಗಳ ವಿವರಣೆ ನೀಡಿದರು. ಕ್ರೀಡಾಕೂಟದ ಪ್ರಾಯೋಜಕರುಗಳನ್ನು ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳನ್ನು ಸಂಘದ ಅಧ್ಯಕ್ಷ ಮಹೇಶ್‌ ಹೆಗ್ಡೆ ಪುಷ್ಪಗುಚ್ಚವನ್ನಿತ್ತು  ನೀಡಿ ಗೌರವಿಸಿದರು.

Advertisement

ನಂತರ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು, ಪುರುಷರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು.  ವಿವಿಧ ಓಟದ ಸ್ಪರ್ಧೆಗಳು, ಲಿಂಬು ಚಮಚ, ಪೊಟೆಟೋ ರೇಸ್‌, ರಿಲೇ ಓಟ, ಹಗ್ಗ ಜಗ್ಗಾಟ, ವಾಲಿಬಾಲ್‌, ಥ್ರೋ ಬಾಲ್‌, ಶಾಟ್‌ಪುಟ್‌, ಕಪಲ್‌ ರೇಸ್‌, ಲಗೋರಿ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ದಾನಿಗಳ ಪ್ರಾಯೋಜಕತ್ವದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಚಹಾ-ಪಾನೀಯಗಳ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಮಾಜ ಬಾಂಧವರು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಶುಭಕೋರಿದರು.  ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿ ಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರಾಕೇಶ್‌ ಶೆಟ್ಟಿ ಬೆಳ್ಳಾರೆ ಹಾಗೂ ಮಾಜಿ ನಗರಸೇವಕ ಜಗದೀಶ್‌ ಶೆಟ್ಟಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು.  

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next