Advertisement

ಚಳಿಗೆ ನೂಡಲ್ಸ್‌ಗೆ ಅಂಟಿ ಗಾಳಿಯಲ್ಲಿ ನಿಂತ ಚಮಚ!

08:35 PM Jan 14, 2022 | Team Udayavani |

ಅಮೆರಿಕ: ಅಮೆರಿಕದಲ್ಲಿ ಚಳಿಗಾಲದ ತೀವ್ರತೆ ಹೇಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಅದಕ್ಕೊಂದು ಸುಂದರ ಉಪಮೆ ಈಗ ಸಿಕ್ಕಿದೆ.

Advertisement

ಇತ್ತೀಚೆಗೆ ಅಲ್ಲಿನ ಹ್ಯಾಂಪ್‌ಶೈರ್‌ನ ಮೌಂಟ್‌ ವಾಷಿಂಗ್ಟನ್‌ನಲ್ಲಿ ಒಂದು ಬೆಳಗ್ಗೆ ಸ್ಪಘೆಟ್ಟಿಯನ್ನು (ನೂಡಲ್ಸ್‌) ತಿನ್ನಲು ಒಬ್ಬರು ಹೋಗಿದ್ದಾರೆ.

ಆಗ ಗಾಳಿ ಗಂಟೆಗೆ 65 ಮೈಲು ವೇಗದಲ್ಲಿ ಬೀಸುತ್ತಿತ್ತು, ತಾಪಮಾನ ಮೈನಸ್‌ 34 ಸೆಲ್ಸಿಯಸ್‌ ಇತ್ತು. ನೂಡಲ್ಸ್‌ ಹೇಗೆ ಗಡ್ಡೆಯಂತಾಯಿತು ಎಂದರೆ, ಚಮಚದಿಂದ ಅದನ್ನು ಎತ್ತುವಷ್ಟರಲ್ಲಿ ಮತ್ತೆ ಅಲ್ಲಾಡಿಸಲು ಆಗಲಿಲ್ಲ. ನೂಡಲ್ಸ್‌ ಕಡ್ಡಿಯಂತೆ ನಿಂತುಕೊಂಡಿತು. ಅದಕ್ಕೆ ಹಾಕಿದ್ದ ಚಮಚ ಹಾಗೆಯೇ ಅಂಟಿಕೊಂಡು ಗಾಳಿಯಲ್ಲೇ ನಿಂತುಬಿಟ್ಟಿತು. ಇದಕ್ಕೆ ಸಂಬಂಧಪಟ್ಟ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next