Advertisement

ಆಶ್ಲೇಷಾ ಮಳೆ ಅವಾಂತರದ ಫೋಟೋ|– ರಾಜ್ಯದ ಹಲವೆಡೆ ಜನ ಜೀವನ ಕಷ್ಟಕರ

05:58 PM Aug 07, 2020 | Nagendra Trasi |

ಮಣಿಪಾಲ: ಮಹಾಮಳೆ ನಕ್ಷತ್ರ ಆಶ್ಲೇಷಾದ ಅಬ್ಬರಕ್ಕೆ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗ ತತ್ತರಿಸಿ ಹೋಗಿದ್ದು, ಪ್ರಮುಖ ನದಿ, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿ ಮತ್ತಷ್ಟು ಅವಾಂತರ ಸೃಷ್ಟಿಸಿದೆ.

Advertisement

ಏತನ್ಮಧ್ಯೆ ಪ್ರವಾಹ  ಮತ್ತು ಪ್ರಕೃತಿ ವಿಕೋಪದಂತಹ ಸಮಸ್ಯೆ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಾಪು ತಾಲೂಕಿಗೆ ಭೇಟಿ ನೀಡಿದ ವೇಳೆ ಉದಯವಾಣಿ ಜತೆ ಮಾತನಾಡುತ್ತ ತಿಳಿಸಿದ್ದರು.ಶುಕ್ರವಾರವೂ (ಆಗಸ್ಟ್ 07-2020) ಕೂಡಾ ಕೊಡಗು, ಮಡಿಕೇರಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ರಾಯಚೂರಿನ ಲಿಂಗಸೂಗುರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.

ಬೆಳ್ತಂಗಡಿ ಪ್ರದೇಶದಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ ಅಶ್ಲೇಷಾ ಮಳೆ ಅಬ್ಬರ ಸೃಷ್ಟಿಸಿದ ಅವಾಂತರ ಫೋಟೋಗಳಲ್ಲಿ ಸೆರೆಯಾದ ಕ್ಷಣ ಇಲ್ಲಿದೆ…

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next