ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದ್ದು, ಫೆಬ್ರವರಿ 4 ರಿಂದ ಮಾರ್ಚ್ 8 ರ ವೆರೆಗೆ ಚುನಾವಣೆಗಳು ನಡೆಯಲಿದ್ದು ಮಾರ್ಚ್ 11 ರಂದು ಎಲ್ಲಾ ರಾಜ್ಯಗಳ ಫಲಿತಾಂಶ ಒಟ್ಟಿಗೆ ಪ್ರಕಟವಾಗಲಿದೆ.
ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಸುದ್ದಿಗೋಷ್ಠಿ ನಡೆಸಿ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದರು. ಇಂದಿನಿಂದಲೇ ಐದೂ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದರು.
403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ ದಲ್ಲಿ 7 ಹಂತಗಳಲ್ಲಿ, 60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರ ದಲ್ಲಿ 2 ಹಂತದಲ್ಲಿ, 117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್, 70 ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ ಮತ್ತು 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾ ವಿಧಾನಸಭೆಗೆ 1 ಹಂತದಲ್ಲಿ ಮತದಾನ ನಡೆಯಲಿದೆ.
ಚುನಾವಣಾ ದಿನಾಂಕಗಳು ಇಂತಿದೆ
ಉತ್ತರ ಪ್ರದೇಶ (7 ಹಂತಗಳು ): ಫೆಬ್ರವರಿ 11, ಫೆಬ್ರವರಿ 15, ಫೆಬ್ರವರಿ 19, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 4 ಮಾರ್ಚ್ 8.
ಪಂಜಾಬ್ ಮತ್ತು ಗೋವಾ : ಫೆಬ್ರುವರಿ 4
ಉತ್ತರಾಖಂಡ : ಫೆಬ್ರುವರಿ 15
ಮಣಿಪುರ : ಮಾರ್ಚ್ 4 ಮತ್ತು 8