ಮುಂಬಯಿ: ಎಲೆಕ್ಟ್ರಾನಿಕ್ ಚಿಪ್ ಮೂಲಕ ಪೆಟ್ರೋಲ್ ಪಂಪ್‌ನಿಂದ ಪೆಟ್ರೋಲ್-ಡೀಸೆಲ್ ಕಳ್ಳತನ ಮಾಡುವ ರ್ಯಾಕೆಟ್‌ನ ಮಾಸ್ಟರ್‌ಮೈಂಡ್ ಪ್ರಶಾಂತ್ ನುಲ್ಕರ್‌ನನ್ನು ಥಾಣೆ ಅಪರಾಧ ಶಾಖೆಯ ಪೊಲೀಸರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಬಂಧಿಸಿ ಮುಂಬಯಿಗೆ ಕರೆ ತಂದಿದ್ದಾರೆ.
ಪ್ರಶಾಂತ್ ದೇಶದಾದ್ಯಂತ ಪೆಟ್ರೋಲ್ ಕಳ್ಳತನ ಮಾಡುವ ಚಿಪ್‌ಗ್ಳನ್ನು ಪೂರೈಕೆ ಮಾಡುತ್ತಿದ್ದ. ಈತ ಪೆಟ್ರೋಲ್ ತುಂಬಿಸುವ ಯಂತ್ರ ತಯಾರಿಕಾ ಕೆಂಪೆನಿಯ ಮಾಜಿ ನೌಕರನಾಗಿದ್ದ. ಚಿಪ್ ಮೂಲಕ ಪೆಟ್ರೋಲ್ ಕದಿಯುವ ಆರೋಪದ ಮೇಲೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಥಾಣೆ ಯೊಂದರಲ್ಲೇ 98 ಪೆಟ್ರೋಲ್ ಪಂಪ್ ಗಳಿಗೆ ಮೊಹರು ಹಾಕಲಾಗಿತ್ತು.
ಸಹಚರ ವಿವೇಕ್ ಶೇಟೆ ಜೊತೆಗೆ ಸೇರಿಕೊಂಡು ಇಡೀ ದೇಶಕ್ಕೆ ಚಿಪ್ ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿವೇಕ್‌ನನ್ನು ಮೇ ತಿಂಗಳಲ್ಲಿ ಉತ್ತರ ಪ್ರದೇಶದಿಂದ ಬಂಧಿಸಲಾಗಿತ್ತು. ವಾಹನಗಳಿಗೆ ಪೆಟ್ರೋಲ್ ತುಂಬಿಸುವ ಡಿಸ್ಪೆಂಸಿಗ್ ಯೂನಿಟ್‌ಗಳ ನೋಜಲ್‌ನಲ್ಲಿ ಚಿಪ್ ಫಿಟ್ ಮಾಡಲಾಗುತ್ತಿತ್ತು. ಅನಂತರ ಅವುಗಳನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತಿತ್ತು.
ಈ ಚಿಪ್ ಮೂಲಕ ಪ್ರತಿ ಲೀಟರ್‌ನಿಂದ 20 ಮಿ.ಲೀ. ಪೆಟ್ರೋಲ್/ಡಿಸೇಲ್ ಕಳವುಮಾಡಲಾಗುತ್ತಿತ್ತು. ಆದರೆ, ಗ್ರಾಹಕರು ಅದರಪೂರ್ತಿ ಪಾವತಿ ಮಾಡುತ್ತಿದ್ದರು. ಪೆಟ್ರೋಲ್‌ಪಂಪ್‌ನ ಸಿಬಂದಿ ರಿಮೋಟ್‌ನಲ್ಲಿರುವ ಬಟನ್ ಒತ್ತುತ್ತಿದ್ದಂತೆಯೇ ಪೆಟ್ರೋಲ್ ಬೀಳುವುದು ನಿಲ್ಲುತ್ತಿತ್ತು. ಆದರೆ, ಮೀಟರ್ ರೀಡಿಂಗ್ ಮೇಲೆ ಅದು ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಹಾಗಾಗಿ, ಗ್ರಾಹಕರಿಗೆ ತಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗುತ್ತಿರಲಿಲ್ಲ.
ನುಲ್ಕರ್ ಚೀನಾದಿಂದ ಈ ಚಿಪ್‌ಗ್ಳನ್ನು ತರಿಸುತ್ತಿದ್ದ. ವಿಶೇಷ ಸಾಫ್ಟ್‌ವೇರ್‌ವೊಂದನ್ನು ಬಳಸಿ ಅದರಲ್ಲಿ ಬದಲಾವಣೆ ಮಾಡುತ್ತಿದ್ದ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ.
ನುಲ್ಕರ್ ಮತ್ತು ಶೇಟೆಯ ಹೊರತಾಗಿ ಥಾಣೆ ಪೊಲೀಸರು ಈಗಾಗಲೇ ಪೆಟ್ರೋಲ್ ಪಂಪ್‌ಗ್ಳಿಗೆ ಚಿಪ್‌ಗ್ಳನ್ನು ಫಿಟ್ ಮಾಡುತ್ತಿದ್ದ 6 ಮಂದಿ ಫಿಟ್ಟರ್‌ಗಳನ್ನೂ ಬಂಧಿಸಿದ್ದಾರೆ.
ನುಲ್ಕರ್ ಚೀನಾದಿಂದ ಈ ಚಿಪ್‌ಗ್ಳನ್ನು ತರಿಸುತ್ತಿದ್ದ. ವಿಶೇಷ ಸಾಫ್ಟ್‌ವೇರ್‌ವೊಂದನ್ನು ಬಳಸಿ ಅದರಲ್ಲಿ ಬದಲಾವಣೆ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.