Advertisement

ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರು ಕಂಗಾಲು

09:01 AM Feb 10, 2021 | Team Udayavani |

ನವದೆಹಲಿ: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು ಗ್ರಾಹಕರು ಪರಿತಪಿಸುವಂತಾಗಿದೆ.  ಬುಧವಾರದ ವೇಳೆಗೆ (ಫೆ. 10) ಪೆಟ್ರೋಲ್ ದರದಲ್ಲಿ 70 ಪೈಸೆ ಹಾಗೂ ಡಿಸೇಲ್ ದರದಲ್ಲಿ 27 ಪೈಸೆ ದಾಖಲೆಯ ಏರಿಕೆ ಕಂಡಿದೆ.

Advertisement

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.60 ರೂ, ಹಾಗೂ ಡೀಸೆಲ್ ಬೆಲೆ 77.73 ರೂ. ತಲುಪಿದೆ. ಇನ್ನೂ ಮುಂಬೈನಲ್ಲಿ ಇಂದಿನ ಏರಿಕೆಯ ನಂತರ ಪೆಟ್ರೋಲ್ ದಾಖಲೆಯ 94.12 ರೂ ಗೆ ಬಂದು ತಲುಪಿದೆ. ಇನ್ನೂ ಡಿಸೇಲ್ ಬೆಲೆ ಇಂದಿನ ಹೆಚ್ಚಳದ ನಂತರ  84.63 ರೂ.  ಆಗಿದೆ.

ಬೆಂಗಳೂರಿನಲ್ಲೂ ಪೆಟ್ರೋಲ್  ಬೆಲೆ 70 ಪೈಸೆ ಹೆಚ್ಚಳದ ನಂತರ ಲೀಟರ್ ಗೆ 90.53 ರೂ. ಆಗಿದೆ.  ಡಿಸೇಲ್ ನ ಬೆಲೆಯೂ  82. 40 ರೂ ಗೆ ತಲುಪಿದೆ.

ಸೋಮವಾರ, ಏಪ್ರಿಲ್ ವಿತರಣೆಯ ಬ್ರೆಂಟ್ ಕಚ್ಚಾ ತೈಲ ದರವು ಒಂದು ಬ್ಯಾರೆಲ್ ಗೆ 60 ಡಾಲರ್ ತಲುಪಿತು. ಕಚ್ಚಾ ತೈಲ ಬೆಲೆ ಏರಿಕೆ ಯಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ. ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಕೂಡ ಪರಿತಪಿಸುತ್ತಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next