Advertisement
ಪುರುಷರ ವಿಭಾಗದಲ್ಲಿ ಡೊಮಿನಿಕ್ ಥೀಮ್ ಕೂಡ ಅಂತಿಮ ಎಂಟರ ಸುತ್ತಿಗೇರಿದ್ದಾರೆ. ಥೀಮ್ ಕ್ವಾರ್ಟರ್‌ಫೈನಲಿಗೆ ಆಸ್ಟ್ರೀಯಾದ ಡೊಮಿನಿಕ್ ಥೀಮ್ ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಫ್ರಾನ್ಸಿನ ಹುಗೊ ಗ್ಯಾಸ್ಟನ್ ಅವರ ಕನಸನ್ನು ನುಚ್ಚುನೂರು ಮಾಡಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
Related Articles
Advertisement
ಸ್ವಿಟೋಲನಾ ಅಂತಿಮ ಎಂಟರ ಸುತ್ತಿಗೆ: ಮೂರನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅವರು ಸ್ಥಳೀಯ ಭರವಸೆ ಕ್ಯಾರೋಲಿನಾ ಗಾರ್ಸಿಯಾ ಅವರನ್ನು ನೇರ ಸೆಟ್‌ಗಳಿಂದ ಬದಿಗೊತ್ತಿ ಅಂತಿಮ ಎಂಟರ ಸುತ್ತಿಗೇರಿದ್ದಾರೆ. ಅವರು ಇಲ್ಲಿ ಕ್ವಾರ್ಟರ್ ಫೈನಲಿಗೇರುತ್ತಿರುವುದು ಇದು ಮೂರನೇ ಸಲವಾಗಿದೆ. 2015 ಮತ್ತು 2017ರಲ್ಲಿ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಸ್ವಿಟೋಲಿನಾ 6-1, 6-3 ಸೆಟ್‌ಗಳಿಂದ ಗೆದ್ದು ಬಂದರು.
ಸಿಗ್ಮಂಡ್‌ಗೆ ಗೆಲುವು: ಜರ್ಮನಿಯ ಲಾರಾ ಸಿಗ್ಮಂಡ್ ಕಠಿಣ ಹೋರಾಟದಲ್ಲಿ ಸ್ಪೇನ್‌ನ ಪೌಲಾ ಬಡೋಸಾ ಅವರನ್ನು ಸೋಲಿಸಿ ಚೊಚ್ಚಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.